ಅಪ್ಪನದ್ದು ದಿನವಿಡೀ ದುಡಿಮೆ. ಹಗಲು ರಾತ್ರಿ ದುಡಿದು, ಮಕ್ಕಳ ಭವಿಷ್ಯಕ್ಕಾಗಿ ತಾನು ಅನುಭವಿಸುವ ಎಲ್ಲ ನೋವನ್ನು ಹಗುರವಾಗಿ ತೆಗೆದುಕೊಳ್ಳುವ ಮನೋಭಾವ. ಅಮ್ಮನದ್ದು ಅಚ್ಚಳಿಯ ಪ್ರೀತಿ. ಮಕ್ಕಳು ಓದುವ ವೇಳೆಗೆ ಒತ್ತಡವಾದರೂ, ಹೊಟ್ಟೆ ತುಂಬ ಆಹಾರ ತಿನ್ನಬೇಕು ಎನ್ನುವ ತಾತ್ವಿಕತೆ ಸಾಧನೆ ಮಕ್ಕಳದಾದರೂ ಅದರ ಬೆನ್ನಿಗೆ ಶತಮಾನಗಳ ಶ್ರಮದಂತಹ ಅಪ್ಪ ಅಮ್ಮನ ಕಥೆಯಿದೆ. ಅವರ ತ್ಯಾಗ, ಪರಿಶ್ರಮ, ಮತ್ತು ಪ್ರೀತಿ ಮಕ್ಕಳ ಮುಂದಿನ ಯಶಸ್ಸಿಗೆ ಬುನಾದಿ.
ಹೆತ್ತದ್ದು ಅಮ್ಮನಾದರೂ ಒಳಗೊಳಗೆ ಅತ್ತದ್ದು ಅಪ್ಪ, ಹುಟ್ಟಿದಾಗ ಕೂಗಿದ್ದು ಅಮ್ಮನಾದರೂ ಬೀಗಿದಿಟ್ಟ ಉಸಿರು ಬಿಟ್ಟಿದು ನನ್ನಪ್ಪ, ಹೊಟ್ಟೆ ತುಂಬಿಸಿದ್ದು ಅಮ್ಮನಾದರೂ ಹೊಟ್ಟೆ ಕಟ್ಟಿ ದುಡಿದು ಸಾಕಿದ್ದು ಅಪ್ಪ, ಕೇಳಿದನ್ನೆಲ್ಲಾ ಕೊಟ್ಟಿದ್ದು ಅಮ್ಮನಾದರೂ ಅದರ ಹಿಂದಿರುವ ಕಾಣದ ಕೈಗಳು ಅಪ್ಪ, ವಿದ್ಯೆ ತಲೆಗೆ ಹತ್ತಿಸಿದ್ದು ಅಮ್ಮನಾದರೂ ಪ್ರತಿದಿನ ದಾರಿದೀಪವಾದದ್ದು ಅಪ್ಪ, ಹರಸಿ ಹಾರೈಸಿ ಮುತ್ತಿಟ್ಟಿದ್ದು ಅಮ್ಮನಾದರೂ ಪ್ರೀತಿ ವ್ಯಕ್ತಪಡಿಸದೆ ಮೂಕನಾಗಿ ಮೂಲೆಯಲ್ಲಿ ನಿಂತಿದ್ದು ಅಪ್ಪ, ಎಲ್ಲಕ್ಕಿಂತ ಮಿಗಿಲು ಅಮ್ಮನಾದರೂ ಮಿಗಿಲೆನ್ನುವ ಪದವೇ ಸಾಲುತ್ತಿಲ್ಲ.
ನಿನಗೆ ಅಪ್ಪ, ನಾ ಕಂಡ ದೇವರು ಅಮ್ಮನಾದರೂ ಆ ದೇವರಿಗೆ ದೇವರಾಗಿದ್ದವನು ನನ್ನಪ್ಪ. ಮಕ್ಕಳ ಯಶಸ್ಸು ಬೃಹತ್ ಬೆಳಕಿನಿಂದ ಕೂಡಿದ್ದು ಎನಿಸಿದರೂ, ಅದರ ಹಿಂದೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡು ಸಹನೆ, ಪ್ರೋತ್ಸಾಹ, ಪಾಠ, ಪ್ರೀತಿ ಮತ್ತು ಮಾರ್ಗದರ್ಶನ ನೀಡುವವರು ಅಂದರೆ ಅಪ್ಪ ಅಮ್ಮ. "ಮಕ್ಕಳ ಯಶಸ್ಸು ಸೂರ್ಯನಂತೆ ಹೊಳೆಯುತ್ತದೆ, ಆದರೆ ಆ ಬೆಳಕಿನ ಹಿಂದೆ ಇರುವ ಅಪತ್ರಿಮ ಜೀವಗಳು ಅಪ್ಪ ಅಮ್ಮ".
- ಮಂಜುಳಾ ಪ್ರಕಾಶ್
ಆಳ್ವಾಸ್ ಕಾಲೇಜು, ಮೂಡುಬಿದಿರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ