ಏ. 29; ಪರಶುರಾಮ ಜಯಂತಿ

Upayuktha
0

ದುಷ್ಟರನ್ನು ಸಂಹರಿಸುವ ಬ್ರಾಹ್ಮ ಕ್ಷಾತ್ರ ತೇಜಯುಕ್ತ ಅವತಾರ : ಭಗವಾನ್ ಪರಶುರಾಮ



ಗವಂತನು ಬೇರೆ ಬೇರೆ ಯುಗಗಳಲ್ಲಿ ಧರ್ಮದ ಸ್ಥಾಪನೆ ಮತ್ತು ಅಧರ್ಮದ ನಾಶಕ್ಕಾಗಿ ಅನೇಕ ಅವತಾರಗಳನ್ನು ತಾಳಿದ್ದಾನೆ. ಈ ಅವತಾರಗಳಲ್ಲಿ ಭಗವಾನ್ ಪರಶುರಾಮರ ಅವತಾರ ಒಂದು ಅತ್ಯಂತ ಪ್ರಭಾವಶಾಲಿ, ತೇಜಸ್ವಿ ಮತ್ತು ಅದ್ವಿತೀಯ ಯೋದ್ಧಾವತಾರವಾಗಿದೆ. ಭಗವಾನ್ ವಿಷ್ಣುವಿನ ಆರನೆಯ ಅವತಾರ ಪರಶುರಾಮ. ಬ್ರಾಹ್ಮತೇಜ ಮತ್ತು ಕ್ಷಾತ್ರ ತೇಜದ ಸುಂದರ ಸಮ್ಮಿಲನದಿಂದ ಅಧರ್ಮದ ನಾಶ ಮಾಡಿದ್ದಾನೆ. 


1. ಸಪ್ತ ಚಿರಂಜೀವಿಗಳಲ್ಲಿ ಒಬ್ಬರು ಮತ್ತು ಕಾಲದ ಮೇಲೆ ವಿಜಯ ಪಡೆದಿರುವ ಅವತಾರ 

ಭಗವಾನ್ ಪರಶುರಾಮ ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಕಾಲವನ್ನು ಜಯಸಿದ್ದಾರೆ, ಆದಕಾರಣ ಅವರು ಇಂದಿಗೂ ಪೃಥ್ವಿಯಲ್ಲಿ ಅದೃಶ್ಯ ರೂಪದಲ್ಲಿ ವಾಸಿಸುತ್ತಿದ್ದಾರೆ. ಅವರ ಸ್ಮರಣೆಯಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಇಂದಿನ ಈ ಒತ್ತಡಯುಕ್ತ ಜೀವನದಲ್ಲಿ ಅವರ ಸ್ಮರಣೆ ಮನಃಶಾಂತಿ, ತಾಳ್ಮೆ ಮತ್ತು ಪರಾಕ್ರಮ ಪ್ರೇರಣಾದಾಯಕವಾಗಿದೆ. 


2. ಬ್ರಾಹ್ಮತೇಜ ಮತ್ತು ಕ್ಷಾತೇಜದ ಸಂಗಮ 

ಪರಶುರಾಮ ಬ್ರಾಹ್ಮಣರಾಗಿದ್ದರು, ಆದರೆ ಅವರು ಕ್ಷಾತ್ರತೇಜವನ್ನು ಅಳವಡಿಸಿಕೊಂಡರು. ತಂದೆಯಿಂದ ಬ್ರಾಹ್ಮತೇಜ, ಜ್ಞಾನ ಮತ್ತು ತಪಸ್ಸಿನ ಶಕ್ತಿ ದೊರೆಯಿತು, ಹಾಗೂ ತಾಯಿಯಿಂದ ಅವರಿಗೆ ಕ್ಷಾತ್ರ ಗುಣ, ಪರಾಕ್ರಮ ಮತ್ತು ನಿರ್ಭಯತೆ ದೊರೆಯಿತು. ಇಂದಿನ ಯುಗದಲ್ಲಿ ಈ ಗುಣಗಳ ಆಧಾರದಲ್ಲಿ ಕರ್ಮದ ಬಗ್ಗೆ ಚರ್ಚೆ ಆಗುತ್ತದೆ, ಪರಶುರಾಮರು ಇದರ ಆದರ್ಶ ಉದಾಹರಣೆಯಾಗಿದ್ದಾರೆ. 


3. ಅಜೇಯ ಯೋಧ ಮತ್ತು ಶಿಸ್ತಿನ ಶಿಷ್ಯ 

ಪರಶುರಾಮ ಕೇವಲ ಮಹಾಯೋಧ ಅಷ್ಟೇ ಅಲ್ಲದೆ, ಅತ್ಯಂತ ಶಿಸ್ತುಪ್ರಿಯ ಮತ್ತು ತಪಸ್ವಿ ಶಿಷ್ಯ ಕೂಡ ಆಗಿದ್ದರು. ಅವರು ಕಶ್ಯಪ ಮುನಿಗಳು ಮತ್ತು ಭಗವಾನ್ ಶಿವನಿಂದ ಜ್ಞಾನ ಪಡೆದಿದ್ದರು ಮತ್ತು ತಪಸ್ಸಿನ ದಿವ್ಯ ಅಸ್ತ್ರಗಳ ವಿದ್ಯೆಯನ್ನು ಪಡೆದಿದ್ದರು. ಯುವಕರು ಅವರ ಪರಾಕ್ರಮದ ಜೊತೆ ಜೊತೆಗೆ ಸಾಧನೆ ಮತ್ತು ಜ್ಞಾನಾರ್ಜನೆಯ ಭಾವನೆ ಕೂಡ ಅಳವಡಿಸಿಕೊಳ್ಳಬೇಕು. 


4. ಶಾಸ್ತ್ರ ಮತ್ತು ಶಸ್ತ್ರದ ಆದರ್ಶ ಸಮನ್ವಯ 

"ಅಗ್ರತಃ ಚತುರೋ ವೇದಹ, ಪೃಷ್ಟತಃ ಸಶರಂ ಧನು" ಈ ಶ್ಲೋಕದಲ್ಲಿ ಪರಶುರಾಮರ ವ್ಯಕ್ತಿತ್ವದ ಸಾರಾಂಶ ಅಡಕವಾಗಿದೆ ಅವರು ಜ್ಞಾನ ಮತ್ತು ಶೌರ್ಯದ ಒಂದು ಅಲೌಕಿಕ ಸಂಗಮ ತೋರಿದ್ದಾರೆ. ಅವರು ಕೆಲವೊಮ್ಮೆ ಶಸ್ತ್ರದಿಂದ, ಹಾಗೂ ಕೆಲವೊಮ್ಮೆ ಶಾಪದಿಂದ ಅಧರ್ಮದ ನಾಶ ಮಾಡಿದ್ದಾರೆ. ಪ್ರಸ್ತುತ ಶಿಕ್ಷೆ ಮತ್ತು ಶೌರ್ಯ ಎರಡೂ ಕಡಿಮೆಯಾಗಿರುವಾಗ ಭಗವಾನ್ ಪರಶುರಾಮನ ಆದರ್ಶ ಪ್ರೇರಣಾದಾಯಕವಾಗಿದೆ.


5. ಅಧರ್ಮದ ವಿರುದ್ಧ ಕಠಿಣ ಸಂಘರ್ಷ 

ಆಧರ್ಮಿ ರಾಜ ಕಾರ್ತವೀರ್ಯ ಸಹಸ್ರಾರ್ಜುನನನ್ನು ಸೋಲಿಸಿದ ಒಂದು ಘಟನೆಯಿದೆ, ಪರಶುರಾಮರು ಮೊದಲು ತಪಸ್ಸಿನಿಂದ ಸಹಸ್ರಾರ್ಜುನನ ಪುಣ್ಯ ಶಕ್ತಿಯನ್ನು ಕ್ಷೀಣ ಗೊಳಿಸಿದರು ಮತ್ತು ನಂತರ ಯುದ್ಧದಲ್ಲಿ ಅವನನ್ನು ಸಂಹರಿಸಿದರು. ಇದು ಅಧರ್ಮದ ವಿರುದ್ಧ ಸಂಘರ್ಷದ ಒಂದು ಸುಂದರ ಉದಾಹರಣೆಯಾಗಿದೆ.


6. ಗೋಮಾತೆಯ ರಕ್ಷಣೆ ಮತ್ತು ಅಹಂಕಾರಿ ಕ್ಷತ್ರಿಯರ ಸಂಹಾರ 

ಕಾರ್ತವೀರ್ಯ ಕಾಮಧೇನುವನ್ನು ಅಪಹರಿಸಿದಾಗ ಪರಶುರಾಮರು ಮತ್ತೆ ಅದನ್ನು ಪಡೆಯುವುದಕ್ಕಾಗಿ 21 ಬಾರಿ ಪೃಥ್ವಿಯ ಪ್ರದಕ್ಷಿಣೆ ಹಾಕಿ ಅಧರ್ಮಿ ಕ್ಷತ್ರಿಯರ ಸಂಹಾರ ಮಾಡಿದರು. ಇದರಿಂದ ಧರ್ಮದ ರಕ್ಷಣೆಗಾಗಿ ಹಿಡಿದಿರುವ ಶಸ್ತ್ರಗಳು ಪವಿತ್ರವಾಗಿರುತ್ತದೆ ಎಂಬುದು ಗಮನಕ್ಕೆ ಬರುತ್ತದೆ.


7. ವೈರಾಗ್ಯ ಮತ್ತು ದಾನಶೀಲತೆ 

ಭಗವಾನ್ ಪರಶುರಾಮ ಅತ್ಯಂತ ದಾನಿಗಳಾಗಿದ್ದರು. ಅಶ್ವಮೇಧ ಯಜ್ಞದ ನಂತರ ಅವರು ಸಂಪೂರ್ಣ ಭೂಮಿಯನ್ನು ಮಹರ್ಷಿ ಕಶ್ಯಪರಿಗೆ ದಾನವಾಗಿ ನೀಡಿದರು ಮತ್ತು ಸ್ವತಹ ಮಹೇಂದ್ರ ಪರ್ವತದಲ್ಲಿ ನಿಂತು ಸಂನ್ಯಾಸ ಜೀವನ ನಡೆಸಿದರು. ಪ್ರಸ್ತುತ ಯುಗದಲ್ಲಿ ಅಧಿಕಾರ, ಧನ ಮತ್ತು ಅಹಂಕಾರ ಹೆಚ್ಚುತ್ತಿದೆ, ಇದರ ಮುಂದೆ ಅವರ ವೈರಾಗ್ಯ ಪ್ರೇರಣಾದಾಯಕವಾಗಿದೆ. 



8. ಗುರು ಶಿಷ್ಯ ಪರಂಪರೆಯ ಪಾಲನೆ 

ಪರಶುರಾಮ ಭಗವಾನ್ ಶಿವ ಮತ್ತು ದತ್ತಾತ್ರೇಯರಂತಹ ಅದ್ವಿತೀಯ ಗುರುಗಳ ಶಿಷ್ಯರಾಗಿದ್ದರು. ಅವರಿಂದ ಅವರು ವೇದ, ಆತ್ಮಜ್ಞಾನ, ಶಸ್ತ್ರವಿದ್ಯೆ ಮತ್ತು ಯೋಗವಿದ್ಯೆ ಕಲಿತರು. ಪ್ರಸ್ತುತ ಶಿಕ್ಷಣವು ಕೇವಲ ತಾಂತ್ರಿಕ ಜ್ಞಾನದವರೆಗೆ ಸೀಮಿತವಾಗಿರುವಾಗ ಪರಶುರಾಮರ ಗುರುಸೇವೆ ಮತ್ತು ಸಮರ್ಪಣೆ ಪ್ರೇರಣೆ ನೀಡುತ್ತದೆ. 


ಯುವ ಪೀಳಿಗೆ ಪರಶುರಾಮರ ಗುಣಗಳನ್ನು ಅಳವಡಿಸಿಕೊಂಡರೆ ಶಕ್ತಿಶಾಲಿ, ವಿವೇಕಿ ಮತ್ತು ನಿಸ್ವಾರ್ಥಿಗಳು ಆಗಬಹುದು. ಮಹಿಳೆಯರನ್ನು ಗೌರವಿಸುವುದು, ಧರ್ಮದ ರಕ್ಷಣೆ, ಜ್ಞಾನಪ್ರಾಪ್ತಿ, ತಾಳ್ಮೆ ಮತ್ತು ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಯಲ್ಲಿ ಕೊಡಗೆ ನೀಡಬಹುದು.


ಭಗವಾನ್ ಪರಶುರಾಮ ಓರ್ವ ಮಹಾನಯೋಧರಾಗಿದ್ದರು, ಪರಾಕ್ರಮಿ, ತಪಸ್ವಿ ಮತ್ತು ದೂರ ದೃಷ್ಟಿಯ ಮಹಾನಪುರುಷರಾಗಿದ್ದರು. ಇಂತಹ ಬ್ರಾಹ್ಮಕ್ಷಾತ್ರತೇಜಯುಕ್ತ ಅವತಾರಕ್ಕೆ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತಾ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರ ಪ್ರತಿ ನಿಜವಾದ ಭಕ್ತಿಯಾಗಲಿದೆ.



-ವಿನೋದ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter      

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top