ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಸಾಧಕರಿಗೆ ಸನ್ಮಾನ

Chandrashekhara Kulamarva
0



ಪುತ್ತೂರು: ಇಲ್ಲಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನಲ್ಲಿ 2025 ರ ಮಾರ್ಚ್‌ನಲ್ಲಿ ನಡೆದ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀ ರಕ್ಷಾ (ವಿಜ್ಞಾನ), ದೀಕ್ಷಾ ಜೋಗಿ(ವಾಣಿಜ್ಯ) ಪದವಿಪೂರ್ವ ಕಾಲೇಜು ಮುಂಡಾಜೆಯ  ಕೆ.ಎನ್ ಧನುಷ್ ( ಕಲಾ ವಿಭಾಗ) ಹಾಗೂ ಎಂ.ಎಚ್ ಅನ್ವಿತಾ (ವಾಣಿಜ್ಯ), ಕಲ್ಲಡ್ಕ ಪದವಿಪೂರ್ವ ಕಾಲೇಜಿನ ಆಶಿಕಾ (ವಿಜ್ಞಾನ), ಪ್ರಜ್ಞಾ ( ವಾಣಿಜ್ಯ), ಮಾನಸ ಬಾಳಿಗ ( ಕಲಾ) ಹಾಗೂ ಉಪ್ಪಿನಂಗಡಿಯ ಇಂದ್ರಪ್ರಸ್ಥ ಕಾಲೇಜಿನ ಪ್ರಾಪ್ತಿ (ವಿಜ್ಞಾನ ) ಇವರನ್ನು ಸನ್ಮಾನಿಸಲಾಯಿತು. 

ಈಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಂಶುಪಾಲ ಪ್ರೊ. ವಿ.ಜಿ ಭಟ್, ಉಪಪ್ರಾಂಶುಪಾಲ ಪ್ರೊ.ಶಿವಪ್ರಸಾದ್, ಸಾಧಕ ವಿದ್ಯಾರ್ಥಿಗಳ ಹೆತ್ತವರು ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದು ಸಾಧಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top