ಪಿಯುಸಿ ಫಲಿತಾಂಶ: ಪುತ್ತೂರಿನಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಅತ್ಯಧಿಕ ರ್‍ಯಾಂಕ್‌ಗಳು

Upayuktha
0

 


  • ಕಲಾ ವಿಭಾಗದ ಪಿ. ಯುಕ್ತಶ್ರೀ 593 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ್‍ಯಾಂಕ್‌ ಹಾಗೂ ಜಿಲ್ಲೆಗೆ ಪ್ರಥಮ
  • ವಾಣಿಜ್ಯ ವಿಭಾಗದ ಚೈತನ್ಯ ಎನ್‌. 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರ್‍ಯಾಂಕ್‌ ಹಾಗೂ ತಾಲೂಕಿಗೆ ಪ್ರಥಮ
  • ವಿಜ್ಞಾನ ವಿಭಾಗದ ಶ್ರೀರಕ್ಷಾ 593ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ್‍ಯಾಂಕ್‌
  • ಸತತ ಮೂರನೇ ಬಾರಿ ಕಲಾವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿವೇಕಾನಂದ ತಾಲೂಕಿನಲ್ಲೇ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ
  • 183ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ 100 ಅಂಕಗಳು
  • 348 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ


ಪುತ್ತೂರು: ಕರ್ನಾಟಕ ಶಾಲಾಪರೀಕ್ಷೆ ಮತ್ತು ಮೌಲ್ಯನಿರ್ಣಯಮಂಡಳಿ ಕಳೆದ ಮಾರ್ಚ್‌ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕಪರೀಕ್ಷೆ-1 ರಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಕಲಾವಿಭಾಗದಲ್ಲಿ ಪಿ. ಯುಕ್ತಶ್ರೀ 593 ಅಂಕಗಳೊಂದಿಗೆ‌ ರಾಜ್ಯಕ್ಕೆ 5ನೇ ರ್‍ಯಾಂಕ್‌ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಇವರು ಬೆಂಗಳೂರಿನ ಪಿ ಹೇಮಚಂದ್ರ ಹಾಗೂ ಹೈಮಿತಾ ಪಿ ದಂಪತಿಗಳ ಪುತ್ರಿ. ವಾಣಿಜ್ಯ ವಿಭಾಗದ ಚೈತನ್ಯ ಎನ್‌. 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ರ್‍ಯಾಂಕ್‌ ಹಾಗೂ  ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಬಂಟ್ವಾಳ ತಾಲೂಕಿನ ಉಮೇಶ್‌ ಅಡಪ ಹಾಗೂ ಪ್ರೇಮಾ ದಂಪತಿಗಳ ಪುತ್ರಿ. ವಿಜ್ಞಾನ ವಿಭಾಗದಲ್ಲಿ ಶ್ರೀರಕ್ಷಾ 593ಅಂಕಗಳೊಂದಿಗೆರಾಜ್ಯಕ್ಕೆ 7ನೇ‌  ರ್‍ಯಾಂಕ್‌ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಬಾಯಾರಿನ ಗಣಪತಿ ಭಟ್‌ ಹಾಗೂ ಗಾಯತ್ರಿ ದಂಪತಿಗಳ ಪುತ್ರಿ.


ಕಲಾ ವಿಭಾಗದಲ್ಲಿ ತೃಪ್ತಿ ಎ.ಕೆ (ಪುತ್ತೂರು, ನೆಹರು ನಗರದ ಆನಂದ ಗೌಡ ಕೆ ಹಾಗೂ ಪಿ. ದಾಜಮ್ಮ ದಂಪತಿಗಳ ಪುತ್ರಿ)  590 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ್‍ಯಾಂಕ್‌ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಕೀರ್ತಿವರ್ಧನ್‌ ಎಂ (ಪುತ್ತೂರು ತಾಲೂಕು, ಪಡ್ನೂರು ಗ್ರಾಮದ ಲಕ್ಷ್ಮಿವೆಂಕಟಕೃಷ್ಣ ಭಟ್‌ ಹಾಗೂ ಹೇಮರಶ್ಮಿ ದಂಪತಿಗಳ ಪುತ್ರ) 591 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರಾಂಕ್, ಅನುದೀಪ್‌ ಪಿ (ಪುತ್ತೂರು ತಾಲೂಕು, ನರಿಮೊಗರಿನ ನಾರಾಯಣ ಬನ್ನಿಂತಾಯ ಪಿ ಹಾಗೂ ವಿನುತಾ ಪಿ.ಎನ್‌ ದಂಪತಿಗಳ ಪುತ್ರ) ಹಾಗೂ ಅನಘಾ ಡಿ ಶೆಟ್ಟಿ ( ಪುತ್ತೂರು ತಾಲೂಕಿನ ನೆಹರೂನಗರದ ದಿನೇಶ್‌ ಶೆಟ್ಟಿ ಹಾಗೂ ಸವಿತಾ ಡಿ. ಶೆಟ್ಟಿ ದಂಪತಿಗಳ ಪುತ್ರಿ) 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ. 


ವಾಣಿಜ್ಯ ವಿಭಾಗದಲ್ಲಿ ಅನುಶ್ರೀ (ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪಿ. ಸತೀಶ್‌ ಮರಡಿತ್ತಾಯ ಹಾಗೂ ದೀಪಾ ದಂಪತಿಗಳ ಪುತ್ರಿ) 591 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ್‍ಯಾಂಕ್‌ , ದೀಕ್ಷಾ ಜೋಗಿ (ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದ ಲಕ್ಷ್ಮಣ್‌ ಜೋಗಿ ಹಾಗೂ ಭಾರತಿ ದಂಪತಿಗಳ ಪುತ್ರಿ) 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ರ್‍ಯಾಂಕ್‌ ಗಳಿಸಿರುತ್ತಾರೆ.


ಕಾಲೇಜಿನ ಒಟ್ಟು 814 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 348 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 392 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇದರೊಂದಿಗೆ ಪುತ್ತೂರಿನಲ್ಲಿ ರಾಜ್ಯಮಟ್ಟದಲ್ಲಿ ಅತ್ಯಧಿಕ ರ್‍ಯಾಂಕ್‌ ಗಳನ್ನು ಗಳಿಸಿದ ಏಕೈಕ ವಿದ್ಯಾಸಂಸ್ಥೆ ಎನ್ನುವ ಹೆಗ್ಗಳಿಕೆಗೆ ವಿವೇಕಾನಂದ ಪದವಿಪೂರ್ವಕಾಲೇಜು ಪಾತ್ರವಾಗಿದೆ. 


ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. 



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top