ಸಂಗೀತ ಕೇವಲ ಮನರಂಜನೆಗೆ ಸೀಮಿತವಾಗದೆ ಜ್ಞಾನಶಕ್ತಿ ಬೆಳೆಯುತ್ತದೆ: ಜಯಲಕ್ಷ್ಮಿ

Chandrashekhara Kulamarva
0



ಕಾಸರಗೋಡು: ಸಂಗೀತ, ನೃತ್ಯ ಕೇವಲ ಮನರಂಜನೆಗೆ ಸೀಮಿತವಾಗದೇ ದೈಹಿಕ, ಮಾನಸಿಕ ಪರಿಜ್ಞಾನ, ಜ್ಞಾನಶಕ್ತಿ ಬೆಳೆಯುತ್ತದೆ. ಮಕ್ಕಳು ಕುಚೇಷ್ಠೆ, ಮಕ್ಕಳಾಟ ಸಹಜ. ಅದರೂ ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸಿಕೊಂಡರೆ ವಿದ್ಯಾಭ್ಯಾಸಕ್ಕೆ ಪರಿಪೂರ್ಣತೆ ಬರುತ್ತದೆ ಎಂದು ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್‌ ಹೇಳಿದರು. 

ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ವರಾಹ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಮಕ್ಕಳಿಗಾಗಿ ಸುಗಮ ಸಂಗೀತ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿದರು.


ಸುಮನಾರಾವ್ ಪುತ್ತೂರಿನ ಉದಯಗಾನ ಸಂಗೀತ ಕೇಂದ್ರದ ಉಪನ್ಯಾಸಕರಾದ ಮತ್ತು ಕುಮಾರಿ ಸುಪ್ರಜಾ ರಾವ್ ಸುಗಮ ಸಂಗೀತ ಕಾರ್ಯಾಗಾರ ವ್ಯವಸ್ಥಿತವಾಗಿ ಸುಶ್ರಾವ್ಯವಾಗಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಚಲನಚಿತ್ರಗೀತೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಸಂಗೀತ ಗುರುಗಳಾದ  ಲತಾ ಕೇಶವ  ಭಟ್, ಬಾಲಕೃಷ್ಣ ಚೆರುಗೋಳಿ ಉಪಸ್ಥಿತರಿದ್ದು ಯಶಸ್ವಿಯಾದ ಈ ಕಾರ್ಯಾಗಾರಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.  ಸುನೀತಾ ಬೈಪಡಿತ್ತಾಯ,ಶ್ರೀರಾಮ ಕಾರಂತ್, ಚಂದನ್ ಕಾರಂತ್, ಅಶೋಕ ಬಾಡೂರು,  ಶಶಿಕಲಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು.


ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನಾ ಪತ್ರ, ನೆನಪಿನ ಕಾಣಿಕೆ ವಿತರಿಸಲಾ ಯಿತು.ಶಿಬಿರಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ  ರಾಧಾಮಣಿ ಮೀಯಪದವು ಸ್ವಾಗತಿಸಿದರು,  ಜಯಲಕ್ಷ್ಮಿ ಚಂದ್ರಶೇಖರ ಹೊಳ್ಳ ನಿರೂಪಿಸಿದರು. ತಾರಾ ಪ್ರವೀಣ್‌ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top