ಸ್ಫೂರ್ತಿ ಸೆಲೆ: ಬದುಕೆಂಬ ಜರ್ನಿ

Upayuktha
0

 



ಮ್ಮ ಬದುಕು ಒಂದು ವಿಧಿ ನಿಶ್ಚಯಿಸಿದ ಪಯಣ ಎಂದು ಹೇಳಬಹುದು. ಹುಟ್ಟು ಮತ್ತು ಸಾವಿನ ನಡುವಿನ ಈ ದೂರ ಪ್ರಯಾಣ ಅನೇಕ ತಿರುವುಗಳನ್ನು ಒಳಗೊಂಡಿದೆ. ಈ ಬದುಕೆಂಬ ಜರ್ನಿಯಲ್ಲಿ ಕಷ್ಟ, ನೋವು, ಸೋಲು ಮುಂತಾದ ಬಿಸಿಲು, ಮಳೆಗಳನ್ನೂ ದಾಟಿ ನಮ್ಮ ಪಯಣ ಮುಂದಕ್ಕೆ ಸಾಗಬೇಕು. ನಮ್ಮ ಶಿಕ್ಷಣ, ಉತ್ತಮ ಉದ್ಯೋಗ, ವಿವಾಹ, ಬಂಧು ಬಾಂಧವರು ಮುಂತಾದವರು ಹಾದಿಯಲ್ಲಿ ಸಿಗುವ ಮರಗಳ ನೆರಳಿದ್ದ ಹಾಗೆ. ಅದು ಸ್ವಲ್ಪ ಮಟ್ಟಿಗೆ relaxation ಅಷ್ಟೇ, ಆದರೆ ಮರಗಳ ನೆರಳು ಸಿಕ್ಕಿದೆ ಎಂದು ನಾವು ನಮ್ಮ ಪ್ರಯಾಣದ ಚಿಂತೆ ಬಿಟ್ಟು ಅಲ್ಲಿಯೇ ಕುಳಿತುಕೊಳ್ಳಲು ಆಗುವುದಿಲ್ಲ. ನಮ್ಮ ನಮ್ಮ ಪ್ರಯಾಣಕ್ಕೆ ನಾವೇ ಜವಾಬ್ದಾರರು. The journey must be go on ಅಷ್ಟೇ.


ಅದಕ್ಕೆ ದಾಸರು "ಈ ಭವಸಾಗರವನ್ನು ದಾಟಿಸಿ ಪಾರು ಮಾಡು" ಎಂದು ಭಗವಂತನಲ್ಲಿ ಬೇಡಿದ್ದಾರೆ. ಈ ಬದುಕೆಂಬ ಸಾಗರದಲ್ಲಿ  ಹಲವು ರೀತಿಯ ಅಲೆಗಳು, ಭಾವನೆಗಳು ಎಂಬ ನೂರಾರು ಸೆಳೆತಗಳು, ತಿರುಗಣಿ ಮಡುಗಳು ನಮ್ಮನ್ನು ಸೆಳೆತದಲ್ಲಿ ಸಿಕ್ಕಿಸಲು ಕಾಯ್ದು ಕೊಂಡು ಕುಳಿತಿರುತ್ತವೆ, ಅವೆಲ್ಲವುಗಳಿಂದ ಪಾರಾದರೆ ಮಾತ್ರ ನಮ್ಮ ಪ್ರಯಾಣವನ್ನು ಸಂತೃಪ್ತಿಯಿಂದ ಮುಂದುವರಿಸಲು ಸಾಧ್ಯ. ಇದು ನಮ್ಮ ಜೀವನದಲ್ಲಿ ಗುರಿಗಳನ್ನು ಸಾಧಿಸುವ ಪ್ರಯಾಣಕ್ಕೂ ಅನ್ವಯವಾಗುತ್ತದೆ.


ಜಪಾನ್ ಭಾಷೆಯಲ್ಲಿ ಗಾದೆಯೊಂದಿದೆ. "ನೀನು ಪ್ರಯಾಣ ಮಾಡುವಾಗ ತಪ್ಪು ದಿಕ್ಕಿನಲ್ಲಿ ನಿನ್ನ ಟ್ರೈನು ಹೊರಟಿದ್ದರೆ ಬೇಗನೆ ಮುಂದಿನ  ಸ್ಟೇಷನ್ನಿನಲ್ಲಿ ಇಳಿದುಕೋ ಇಲ್ಲವಾದರೆ ನಿನ್ನ ಪ್ರಯಾಣ ಮರಳಿ ಬರದಂತಹ ತಪ್ಪು ದಿಕ್ಕಿನಲ್ಲಿ ಸಾಗುತ್ತದೆ". ಇಷ್ಟು ಸಾಕು, ನಮ್ಮ ಪ್ರಯಾಣದ ದಿಕ್ಕಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು.


ನಮ್ಮ ಬದುಕೆಂಬ ಜರ್ನಿಯಲ್ಲಿ ನಮಗೆ ಗೊತ್ತಿದ್ದು, ಗೊತ್ತಿಲ್ಲದೆಯೋ ಅನೇಕ ಜನರ entry ಆಗುತ್ತದೆ. ಕೆಲವರು ನಮಗೆ ಪಾಠ ಕಲಿಸಲೆಂದು ಬಂದಿರುತ್ತಾರೆ. ಆದರೆ ಅವರು ಕಲಿಸಿದ ಪಾಠಗಳು ನಮ್ಮ ಜೀವನದುದ್ದಕ್ಕೂ ದಿಕ್ಸೂಚಿ ಆಗಿ ನಿಂತಿರುತ್ತವೆ. ನಮ್ಮ ಬದುಕೆಂಬ ಜರ್ನಿಯಲ್ಲಿ ಅನೇಕ ತಿರುವುಗಳು, ಟ್ವಿಸ್ಟ್ ಗಳು ನಮ್ಮನ್ನು ಆಕ್ರಮಿಸಿಕೊಂಡಿರುತ್ತವೆ. ಇವುಗಳನ್ನು ದಾಟಿ ಮುಂದಕ್ಕೆ ಮಾತ್ರ ಸಾರ್ಥಕ, ಎಂಬ ಸ್ಟೇಷನ್ ನಮಗಾಗಿ ಕಾಯುತ್ತಿರುತ್ತದೆ.


ಆದರೆ ಇದು ಪ್ರತಿಯೊಬ್ಬರ ಒಂಟಿ ಪ್ರಯಾಣ. ವಿಧಿ ಎಂಬ ಟ್ರಾಫಿಕ್ inspector ದಾಟಿ ನಮ್ಮ ಜೀವನದಲ್ಲಿ ಬರುವ ಮಳೆ, ಪ್ರವಾಹ, ಬಿಸಿಲು, ನೆರಳು, ಇವೆಲ್ಲವನ್ನೂ ದಾಟಿದಾಗ ಮಾತ್ರ ನಮಗೆ ಸಿಗುವುದು "ಸಾರ್ಥಕ" ಎಂಬ ಸ್ಟೇಷನ್ ನಮಗಾಗಿ ಕಾಯುತ್ತಿರುತ್ತದೆ.

ಬನ್ನಿ, ನಮ್ಮ ಪಾಲಿನ, ನಮಗಾಗಿ ಮೀಸಲಿಟ್ಟ ಪ್ರಯಾಣವನ್ನು ಉತ್ತಮ ರೀತಿಯಲ್ಲಿ ಮುಂದುವರೆಸೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top