ಸ್ಫೂರ್ತಿಸೆಲೆ: ವಯಸ್ಸು ಕೇವಲ ಸಂಖ್ಯೆ ಅಷ್ಟೇ

Upayuktha
0



ಪ್ರತಿಯೊಬ್ಬ ಮನುಷ್ಯನ ವಯಸ್ಸು ಆತನ ಜೀವಿತಾವಧಿಯನ್ನು ಬಿಂಬಿಸುತ್ತದೆ. ಆದರೆ ಮನುಷ್ಯನ ಸಾಧನೆಯ ಛಲದ ಮುಂದೆ ವಯಸ್ಸು ಯಾವ ಲೆಕ್ಕ? ಮನುಷ್ಯನ ಜೀವನವನ್ನು ಆತನ ಬಾಲ್ಯಾವಸ್ಥೆ, ಯೌವ್ವನ, ಮುಪ್ಪು ಮತ್ತು ಆತನ ಜೀವನದ ಕೊನೆಯ ಹಂತ ಸಾವು. 

ಆದರೆ ಮನುಷ್ಯನ ಸಾಧಿಸಬೇಕು ಎಂಬ ಛಲ ಮನುಷ್ಯನನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುತ್ತದೆ.


ಕೆಲವರಿಗೆ ಅವರ ವಯಸ್ಸೇ ಒಂದು ನೆಪವಾಗಿ ಪರಿಣಮಿಸಿರುತ್ತದೆ. ಚಿಕ್ಕವರಿದ್ದಾಗ ಚಿಕ್ಕ ವಯಸ್ಸಿನ ನೆಪ, ಯುವ ವಯಸ್ಸಿನಲ್ಲಿ ಎಂಜಾಯ್ ಮಾಡುವ ನೆಪ, ಮುಪ್ಪಿನಲ್ಲಿ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ ಎಂಬ ನೂರಾರು ಸಬೂಬುಗಳು.


ಆದರೆ ಸಾಧಿಸಬೇಕೆಂದು ಹೊರಟವರಿಗೆ ವಯಸ್ ಕೇವಲ sideline ಅಷ್ಟೇ. ಕೇವಲ ಎಂಟು ವಯಸ್ಸಿಗೆ ಸಕಲ ವಿದ್ಯಾ ಪಾರಂಗತರಾದ ಶಂಕರಾಚಾರ್ಯರು, ಇಪ್ಪತ್ತೆರಡು ವಯಸ್ಸಿಗೆ "ಜ್ಞಾನೇಶ್ವರಿ" ಬರೆದ ಜ್ಞಾನೇಶ್ವರರು, ಮೂವತ್ತೊಂಬತ್ತು ವಯಸ್ಸಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಸ್ವಾಮಿ ವಿವೇಕಾನಂದರು, ಮಾಲ್ಗುಡಿ ಡೇಸ್ ಧಾರವಾಹಿ ಮಾಡಿ, ಕನ್ನಡದ ಸಂಸ್ಕೃತಿಯನ್ನು ಪರಿಚಯಿಸಿದ ಶಂಕರ್ ನಾಗ್ ಇವರಿಗೆ ವಯಸ್ಸು ಎಂದೂ ಅವರ ಹತ್ತಿರ ಸುಳಿಯಲೇ ಇಲ್ಲ.

 

ಅತಿ ಚಿಕ್ಕ ವಯಸ್ಸಿನ ಸಂಸದ ತೇಜಸ್ವಿ ಸೂರ್ಯ, ಚಿಕ್ಕ ವಯಸ್ಸಿನಲ್ಲಿ ಮಂತ್ರಿಯಾದ ಬೀ.ಬೀ. ಚಿಮ್ಮನಕಟ್ಟಿ, ಎಂಬತ್ತರ ಆಸುಪಾಸಿನಲ್ಲಿ ಅಮೆರಿಕದ ಅಧ್ಯಕ್ಷರಾದ ಟ್ರಂಪ್ ಇವರಿಗೆ ವಯಸ್ಸು ಗೌಣ ಅಷ್ಟೇ. ಮನುಷ್ಯ ಸಾಧನೆಗೆ ಛಲವಿದ್ದರೆ ಎಂಟು ವರ್ಷವೂ ಅಷ್ಟೇ, ಎಂಬತ್ತಾದರೂ ಅಷ್ಟೇ.


ಯಾವಾಗಲೋ ಬರುವ ಸಾವಿಗೆ ಈಗಿನಿಂದಲೇ ಗೊಳೋ ಎಂದು ಹಳಿಯುತ್ತಾ ಕುಳಿತರೆ ಕೇವಲ ಕಾಲ ಹರಣ ಅಷ್ಟೇ.ಅದರ ಪಾಡಿಗೆ  ಸಾವು ಅದರ ಸಮಯಕ್ಕೆ ಬರುತ್ತದೆ ಅಷ್ಟೇ. ಅದಕ್ಕೆ ಬೇಂದ್ರೆಯವರು ಒಂದು ಕಡೆ ಹೇಳುತ್ತಾರೆ "ಸಾವಿಗೆ ನಾ ಹೆದರಂಗಿಲ್ಲ, ಯಾಕಂದ್ರೆ ಅದು ಬಂದಾಗ ನಾ ಇರಾಂಗಿಲ್ಲ"  ಅಷ್ಟೇ.


ಜೀವನೋತ್ಸಾಹ ಎಂದರೆ ಅದು never expired, lifetime validity ಇದ್ದ ಹಾಗೆ.


ನಮ್ಮ ಧಾರ್ಮಿಕ ಗ್ರಂಥಗಳ ಪ್ರಕಾರ ಎಂಬತ್ನಾಲ್ಕು ಲಕ್ಷ ಜನ್ಮ ದಾಟಿ ಬಂದ ಮೇಲೆ ಮನುಷ್ಯ ಜನ್ಮ. ಇದು ಕರ್ಮ ಜನ್ಮ  ಮತ್ತು ಉಳಿದವುಗಳು ಮಾಡಿದ್ದನ್ನ್ನು ತೀರಿಸಲಿಕ್ಕೆ ಹುಟ್ಟಿ ಬಂದವುಗಳು. ಅದಕ್ಕಾಗಿಯೇ ಮನುಷ್ಯನಿಗೆ ಕರ್ಮ ಮಾಡಲು ದೇವರು ಬುದ್ದಿ ಮತ್ತು ಭೌತಿಕ ಶಕ್ತಿಯನ್ನು ಕೊಟ್ಟಿದ್ದಾನೆ.


ಅದಕ್ಕಾಗಿಯೇ ನಮ್ಮ ಋಷಿಗಳು ಎಂದೂ ಮರಣದ ಹಾದಿಯನ್ನು ಕಾಯುತ್ತಾ ಕೂಡಲಿಲ್ಲ. ಅದರ ಬದಲು "ಶತಮಾನಮ್ ಭವತಿ, ಶತಾಯುಷ್ಯಂ ಭವತಿ" ಎಂದು ಹರಸಿದರು. ಜೀವನೋತ್ಸಾಹದ ಬಗ್ಗೆಯಾಗಿ ಜೀವನದ ಪಾಠವನ್ನು ಕಲಿಸಿಕೊಟ್ಟರು. 

ನಾವು ಕೂಡ ಎಂದೋ ಬರುವ ಸಾವಿನ ಚಿಂತೆ ಮಾಡದೆ ವಯಸ್ಸನ್ನು ಬದಿಗಿಟ್ಟು ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ.

ಏನಂತೀರಾ?

- ಗಾಯತ್ರಿ ಸುಂಕದ, ಬದಾಮಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top