ಇದೊಂದು ಇಂಟರೆಸ್ಟಿಂಗ್ ಕಾನ್ಸೆಪ್ಟ್ ಅಂತ ಅನಿಸಲ್ವಾ? ಆದರೆ ಅಷ್ಟು ಮಹತ್ವ ಕೂಡಾ ಹೌದು. ಒಬ್ಬರ ಜೊತೆ connect ಆಗುವುದೆಂದರೆ ನಮ್ಮ ಬದುಕಿನಲ್ಲಿ ವ್ಯಕ್ತಿಯನ್ನು ಬರ ಮಾಡಿಕೊಂಡಂತೆ. ಒಬ್ಬ ವ್ಯಕ್ತಿಯ ಜೊತೆ connect ಆದ ಮೇಲೆ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಜೀವನದಲ್ಲಿ ನಮಗೆ ಗೊತ್ತಿಲ್ಲದಂತೆ ಬದಲಾವಣೆಗಳು ಶುರು ಹಚ್ಚಿ ಕೊಂಡು ಬಿಡುತ್ತವೆ. ಎಷ್ಟೋ ಸಲ ವ್ಯಕ್ತಿಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತಾರೆ, ನದಿಗಳು ತಮ್ಮ ಹರಿವಿನ ದಿಕ್ಕನ್ನು ಬದಲಿಸಿದ ಹಾಗೆ.
ವ್ಯಕ್ತಿಗಳು ನಮ್ಮ ಜೀವನಕ್ಕೆ connnect ಆದರೆ ಎರಡು ರೀತಿಯಲ್ಲಿ ಆವರಿಸಿಕೊಂಡು ಬಿಡುತ್ತಾರೆ, ಒಂದು ಸುಂಟರಗಾಳಿ ರೀತಿಯಲ್ಲಿ ಮತ್ತು ತಂಗಾಳಿಯ ರೀತಿಯಲ್ಲಿ.
ಉದಾಹರಣೆಗೆ ಹೇಳ ಬೇಕೆಂದರೆ, ದುರ್ಯೋಧನ ಶಕುನಿಗೆ ಕನೆಕ್ಟ್ ಆಗಿದ್ದಕ್ಕ್ಕೆ ಪಾಂಡವರ ಮೇಲೆ ವಿನಾ ಕಾರಣ ದ್ವೇಷ ಮಾಡಿ ಯುದ್ಧದಲ್ಲಿ ಸೋತು ತೊಡೆ ಮುರಿದು ಕೊಂಡು ಸಾಯುವಂತಹ ಪರಿಸ್ಥಿತಿ ತಂದು ಕೊಳ್ಳಬೇಕಾಯಿತು. ಇದಕ್ಕೆ ವಿರುದ್ಧವಾಗಿ ಅರ್ಜುನ ಕೃಷ್ಣನ ಜೊತೆ ಕನೆಕ್ಟ್ ಆಗಿ ಭಗವದ್ಗೀತೆಯ ಸೃಷ್ಟಿಗೆ ಕಾರಣನಾಗಿ ಸಾಧನೆ ಗೈದನು.
ಇದು ಕನೆಕ್ಟ್ ಆದ ಪರಿಣಾಮ.
ಕೆಲವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರನ್ನು "Hi Connections" ಎಂದು ಸಂಬೋಧಿಸುತ್ತಾರೆ. ಅಂದರೆ ಆಯಾ ವ್ಯಕ್ತಿಗಳು ಎಷ್ಟರ ಮಟ್ಟಿಗೆ connect ಆಗಿದ್ದಾರೆ ಎಂದು ತೋರಿಸುತ್ತದೆ.
ಎಲ್ಲೋ ಓದಿದ ನೆನಪು.
ಅಕ್ಕಿ+ ಅರಿಶಿಣ +ಕುಂಕುಮ'=ಅಕ್ಷತೆ
ಅಕ್ಕಿ+ಎಳ್ಳು = ಶ್ರಾದ್ಧದ ತರ್ಪಣ
ಅಕ್ಕಿ+ಉದ್ದಿನ ಬೇಳೆ = ವಡೆ
ಅಕ್ಕಿ+ಹಾಲು +ಸಕ್ಕರೆ= ಪಾಯಸ
ನೀವು ಯಾರ ಜೊತೆ ಕನೆಕ್ಟ್ ಆಗಲು ಬಯಸುತ್ತೀರೋ ಅದು ನಿಮಗೆ ಬಿಟ್ಟಿದ್ದು.
ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ