ನಿಟಿಲಾಕ್ಷ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅತಿ ಮಹಾರುದ್ರಯಾಗ

Upayuktha
1 minute read
0

ಏ.13ರಂದು 121ಕ್ಕೂ ಹೆಚ್ಚು ವೈದಿಕರಿಂದ ರುದ್ರಪಾರಾಯಣ 






ಬಂಟ್ವಾಳ: ಕಲ್ಲಡ್ಕ ಮೊಗರನಾಡು ಸಾವಿರ ಸೀಮ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2,3,4 ರಂದು ಅನ೦ತ್‌ ಭಟ್‌ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ. ರಾಷ್ಟ, ರಾಜ್ಯ ಮಟ್ಟದ ಪ್ರಮುಖರು ಯಾಗದಲ್ಲಿ ಭಾಗವಹಿಸುವರು.


ವಾರಾಣಾಸಿ ಕಾಶಿಮಠ ಶ್ರೀಮದ್‌ ಕಾಶಿಜ್ಞಾನ ಸಿ೦ಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳ ದಿವ್ಯ ಉಪಸ್ಮಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ ಯಾಗ ನಡೆಯಲಿದೆ. ಚಿತ್ರದುರ್ಗದ ಬಹ್ಮಾನ೦ದ ರೆಡ್ಡಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಈ ಯಾಗ ನಡೆಯಲಿದೆ.


400 ಮ೦ದಿ ಋತ್ವಿಜರು, 14,641 ಸ೦ಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ. ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವೈದಿಕರಿ೦ದ ನಿತ್ಯ ರುದ್ರ ಪಾರಾಯಣ ಅನ್ನದಾನ ನಡೆಯುತ್ತಿದೆ.


ಏಪ್ರಿಲ್ 13ರಂದು ಭಾನುವಾರ 121 ಕ್ಕಿಂತಲೂ ಅಧಿಕ ರುದ್ರಾಧ್ಯಾಯಿಗಳಿಂದ ಅತಿರುದ್ರ ಪಾರಾಯಣ ನಡೆಯಲಿದೆ. 

ಈ ಮಹತ್ಕಾರ್ಯಕ್ಕೆ ಮಂಗಳೂರಿನ ರುದ್ರ ಸಮಿತಿ ನಂತೂರು ಮತ್ತು ರುದ್ರ ಪಾರಾಯಣ ಮಿತ್ರರು ಲ್ಯಾಂಡ್ ಲಿಂಕ್ಸ್ ದೇರೇಬೈಲು ನವರು 31.03.25 ರಿಂದ ದಿನಾ ನಿಗದಿತ ಸಮಯಕ್ಕೆ ಬೆಳಿಗ್ಗೆ 9.30ಕ್ಕೆ ಶ್ರೀ ದೇವರ ಸಾನ್ನಿಧ್ಯದಲ್ಲಿ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಯಾಗ ಸಮಿತಿಯವರು ದೀಪ ಪ್ರಜ್ವಲಿಸಿದ ನಂತರ ವಿಪ್ರರು ಶ್ರೀ ರುದ್ರ ಪಾರಾಯಣ ಮಾಡುತ್ತಿದ್ದಾರೆ.


ಪ್ರತೀ ಆದಿತ್ಯವಾರ ಬೆಳಿಗ್ಗೆ 7.00 ಘಂಟೆಗೆ ಒಂದನೇ ಆವೃತ್ತಿಯನ್ನು ಮತ್ತು ಬೆಳಿಗ್ಗೆ 9.30ಕ್ಕೆ ಎರಡನೇ ಆವೃತ್ತಿಯನ್ನು ಈವರೆಗೆ ಈ ಎರಡು ವಿಪ್ರ ಗುಂಪುಗಳವರು ನಡೆಸುತ್ತಿದ್ದಾರೆ.


ನಾಡಿದ್ದು ದಿನಾಂಕ 13.04.25 ರ ಭಾನುವಾರವೂ ಇದೇ ರೀತಿಯಲ್ಲಿ ಮತ್ತು 121 ರುದ್ರ ಪಾರಾಯಣ ವಿಪ್ರರು ಮತ್ತು ಇನ್ನೂ ಹಲವಾರು ವಿಪ್ರ ಬಂಧುಗಳ ಗುಂಪುಗಳು ರುದ್ರ ಪಾರಾಯಣ ಮಾಡುತ್ತಾರೆ ಎಂದು ಅತಿ ಮಹಾ ರುದ್ರ ಯಾಗದ ಸಮಿತಿಯವರಿಂದ ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಪ್ರ ಬಂಧುಗಳು ಈ ರುದ್ರ ಪಾರಾಯಣದಲ್ಲಿ ಭಾಗವಹಿಸಬೇಕು ಎಂದು ಓಣಿ ಬೈಲ್ ಶ್ರೀ ಅನಂತ ಭಟ್ ರವರು ಮತ್ತು ಯಾಗ ಸಮಿತಿಯವರು ವಿನಂತಿಸಿದ್ದಾರೆ.

Post a Comment

0 Comments
Post a Comment (0)
To Top