ಕಾಮಗಾರಿಗೆ ಅಡಚಣೆಯಾಗುವ ಮರಗಳ ತೆರವಿಗಾಗಿ ಏಪ್ರಿಲ್ 22 ರಂದು ಸಭೆ

Upayuktha
0



ಉಡುಪಿ: ಕಾಮಗಾರಿಗೆ ಅಡಚಣೆಯಾಗುವ ಬೈಂದೂರು–ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ತಗ್ಗರ್ಸೆ ಗ್ರಾಮದ 153 ಮರಗಳು, ಯಳಜಿತ್ ಗ್ರಾಮದ 600 ಮರಗಳು, ಗೋಳಿಹೊಳೆ ಗ್ರಾಮದ 1246 ಮರಗಳು ಹಾಗೂ ಜಡ್ಕಲ್ ಗ್ರಾಮದ 219 ಮರಗಳು ಸೇರಿದಂತೆ ಒಟ್ಟು2214 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸುವ ಸಂಬಂಧ ಏಪ್ರಿಲ್ 22 ರಂದು ಬೈಂದೂರು ವಲಯ ಅರಣ್ಯ ಅಧಿಕಾರಿಯವರ ಕಚೇರಿಯಲ್ಲಿ  ಸಭೆಗಳು ನಡೆಯಲಿವೆ. 

ತಗ್ಗರ್ಸೆ ಗ್ರಾಮಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಗೆ, ಯಳಜಿತ್- 11.30 ಕ್ಕೆ, ಗೋಳಿಹೊಳೆ ಗ್ರಾಮ- ಮಧ್ಯಾಹ್ನ 2 ಗಂಟೆಗೆ ಹಾಗೂ ಜಡ್ಕಲ್ ಗ್ರಾಮ- 3.30 ಕ್ಕೆ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ.

ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ  ಸಾರ್ವಜನಿಕರು ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಅಥವಾ ನಿಗದಿತ ದಿನಾಂಕದ ಒಳಗಾಗಿ ವೃಕ್ಷ ಅಧಿಕಾರಿ ಹಾಗೂ ಉಪಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ ಅಂಚೆ ಮೂಲಕ ಅಥವಾ ಇ-ಮೇಲ್  kpurforest@yahoo.com ನಲ್ಲಿಯೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top