ಮಂಗಳೂರು: ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್ ಇಂದು 3800 ಟಿಡಿಡಬ್ಲ್ಯು ಸಾಮರ್ಥ್ಯದ ಆರು ಒಣ ಸರಕು ಸಾಗಾಣಿಕೆ ಹಡಗುಗಳ ಸರಣಿಯಲ್ಲಿ ಮೊದಲನೆಯ ಹಡಗನ್ನು ಯುರೋಪಿನ ಅತಿದೊಡ್ಡ ಶಾರ್ಟ್ ಸೀ ಶಿಪ್ಪಿಂಗ್ ಕಂಪನಿಯಾದ ನಾರ್ವೆಯ ಮೆಸರ್ಸ್ ವಿಲ್ಸನ್ ಶಿಪ್ ಮ್ಯಾನೇಜ್‍ಮೆಂಟ್ ಎಎಸ್‍ಗೆ ಹಸ್ತಾಂತರಿಸಿದೆ. ಹಸ್ತಾಂತರ ಸಮಾರಂಭ ನವ ಮಂಗಳೂರು ಬಂದರಿನಲ್ಲಿ ಗುರುವಾರ ಸಂಜೆ ನಡೆಯಿತು.
ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಅವರ ಪತ್ನಿ ಡಾ. ಸುಷ್ಮಾ ಅಕ್ಕರಾಜು ಅವರು ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ, ಹಡಗಿನ ಔಪಚಾರಿಕ ವಿತರಣೆಯನ್ನು ಗುರುತಿಸಲು ಹೊಸ ಹಡಗಿಗೆ ನಾಮಕರಣ ಮಾಡಿದರು.
ನಾರ್ವೆಯ ಮೆಸರ್ಸ್ ವಿಲ್ಸನ್ ಶಿಪ್ ಮ್ಯಾನೇಜ್‍ಮೆಂಟ್ ಎಎಸ್‍ನ ಹಿರಿಯ ಅಧಿಕಾರಿಗಳು, ಮುಖ್ಯ ಹಣಕಾಸು ಅಧಿಕಾರಿ ಐನಾರ್ ಟೋಸ್ರ್ನೆಸ್, ನ್ಯೂ ಬಿಲ್ಡ್ ಸೂಪರಿಂಟೆಂಡೆಂಟ್ ಸೆರ್ಗೆ ಬೊಗ್ಡಾಶೋವ್ ಮತ್ತು ವಿಲ್ಸನ್ ಸೈಟ್ ತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿಎಸ್‍ಎಲ್ ವಹಿವಾಟು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮ್ ಎನ್ ಸ್ವಾಮಿ ಮತ್ತು ಬ್ಯೂರೊ ವೆರಿಟಾಸ್ ಎರಿಕ್ ವೀತ್ ಜತೆಗೆ ಯುಸಿಎಸ್‍ಎಲ್ ಸಿಇಓ ಎ.ಹರಿಕುಮಾರ್ ಮತ್ತು ಉಡುಪಿ ಸಿಎಸ್‍ಎಲ್ ತಂಡದ ಸದಸ್ಯರು ಹಾಜರಿದ್ದರು.
ಕಳೆದ ಮೂರು ವರ್ಷಗಳಲ್ಲಿ ಯುಸಿಎಸ್‍ಎಲ್ ಹಡಗುಕಟ್ಟೆಯು ಕೊಚ್ಚಿನ್ ವಾಟರ್ ಮೆಟ್ರೋ ಯೋಜನೆಗಾಗಿ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ಗಾಗಿ ಎಂಟು ಅಲ್ಯೂಮಿನಿಯಂ ಹಲ್‍ಗಳನ್ನು, ಪಿಎಂಎಂಎಸ್‍ವೈ ಯೋಜನೆಯಡಿಯಲ್ಲಿ ಎಂಟು ಟ್ಯೂನ ಲಾಂಗ್ ಲೈನರ್ ಕಮ್ ಗಿಲ್ನೆಟ್‍ಗಳನ್ನು, ಅದಾನಿ ಹಾರ್ಬರ್ ಸೇವೆಗಳ ಕಂಪನಿಯಾದ ಮೆಸರ್ಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್‍ಗೆ ಎರಡು 62 ಟಿ ಬೊಲ್ಲಾರ್ಡ್ ಪುಲ್ ಎಎಸ್‍ಟಿಡಿಎಸ್ ಟಗ್‍ಗಳನ್ನು ಮತ್ತು ಮೆಸರ್ಸ್ ಪ್ರೈಲ್‍ಸ್ಟಾರ್ ಮ್ಯಾರಿಟೈಮ್ ಲಿಮಿಟೆಡ್‍ಗಳಿಗೆ ಎರಡು 70 ಟಿ ಬೊಲ್ಲಾರ್ಡ್ ಪುಲ್ ಟಗ್‍ಗಳನ್ನು ನಿರ್ಮಿಸಿ ತಲುಪಿಸಿದೆ ಎಂದು ಹೇಳಿದೆ.
ಇದು ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಉಪಕ್ರಮಕ್ಕೆ ಅನುಸಾರವಾಗಿದೆ. ಹಡಗುಕಟ್ಟೆಯು ಮೆಸರ್ಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್ ಜೊತೆಗೆ ಮತ್ತೊಂದು ಹನ್ನೊಂದು 70 ಟಿ ಬೊಲ್ಲಾರ್ಡ್ ಪುಲ್ ಟಗ್‍ಗಳ ನಿರ್ಮಾಣಕ್ಕೆ ಮತ್ತು ಮೆಸ್ಸರ್ಸ್ ಪ್ರೈಲ್‍ಸ್ಟಾರ್ ಮ್ಯಾರಿಟೈಮ್ ಲಿಮಿಟೆಡ್ ಜೊತೆಗೆ ಒಂದು 70 ಟಿ ಬೊಲ್ಲಾರ್ಡ್ ಪುಲ್ ಟಗ್‍ಗಳ ನಿರ್ಮಾಣ ಆದೇಶಗಳಿಗೆ ಸಹಿ ಹಾಕಿದೆ. ಹನ್ನೊಂದು 70 ಟಿ ಟಗ್‍ಗಳ ನಿರ್ಮಾಣಕ್ಕಾಗಿ ಓಷನ್ ಸ್ಪಾರ್ಕಲ್ ಲಿಮಿಟೆಡ್‍ನೊಂದಿಗೆ ಸಹಿ ಹಾಕಲಾದ ಒಪ್ಪಂದಗಳು ಭಾರತೀಯ ಶಿಪ್‍ಯಾರ್ಡ್ ಸಹಿ ಮಾಡಿದ ಅತಿದೊಡ್ಡ ಸರಣಿ ಟಗ್ ನಿರ್ಮಾಣ ಆದೇಶವಾಗಿದೆ.
ಇಂದು ನಾಮಕರಣಗೊಂಡಿರುವ ವಿಲ್ಸನ್ ಇಕೋ 1 ಹಡಗು 3800 ಡೆಡ್‍ವೇಟ್ ಡ್ರೈ ಕಾರ್ಗೋ ಹಡಗು. ಇದು ನಾರ್ವೆ ಸರ್ಕಾರದ ಹಸಿರು ನಿಧಿ ಕಾರ್ಯಕ್ರಮದಡಿಯಲ್ಲಿ ಹೊರಸೂಸುವಿಕೆ ರಹಿತ ಸಾರಿಗೆ ಪರಿಹಾರಗಳನ್ನು ಗುರಿಯಾಗಿಟ್ಟುಕೊಂಡ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಒಟ್ಟು ಯೋಜನಾ ವೆಚ್ಚ ಸುಮಾರು 506 ಕೋಟಿ ರೂಪಾಯಿ ಎಂದು ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ