ಸಮಾಜಮುಖಿ ಸಂಘಟನೆಗಳಿಗೆ ಪ್ರೋತ್ಸಾಹ ಅಗತ್ಯ : ಸಿಜಿಎಂ ಮನೋಜ್ ಕುಮಾರ್

Chandrashekhara Kulamarva
0



ಮಂಗಳೂರು : ಸ್ಪಂದನಾ ಫ್ರೆಂಡ್ಸ್  ಸರ್ಕಲ್ ಕುಳಾಯಿ ಇದರ 31ನೇ ವಾರ್ಷಿಕೋತ್ಸವ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಎಂಆರ್‌ಪಿಎಲ್ ನ  ಚೀಫ್ ಜನರಲ್ ಮೆನೇಜರ್ ಮನೋಜ್ ಕುಮಾರ್ ಮಾತನಾಡಿ ‘ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುತ್ತಿರುವ ಸ್ಪಂದನಾ ಫ್ರೆಂಡ್ಸ್  ಸರ್ಕಲ್ ಮಾದರಿ ಸಂಸ್ಥೆಯಾಗಿದೆ. ಇಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವುದು ಜನರ ಕರ್ತವ್ಯ.  ಸ್ಪಂದನಾ ಸಂಸ್ಥೆಯ ಬಗ್ಗುಂಡಿ ಕೆರೆ ಉಳಿಸಿ  ಅಭಿಯಾನಕ್ಕೆ ಎಂಆರ್‌ಪಿಎಲ್ ನ ಸಂಸ್ಥೆಯಿಂದ ಪೂರಕ ಬೆಂಬಲ ನೀಡಲಾಗುವುದು ಎಂದರು.


ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ಸ್ಪಂದನಾ ಫ್ರೆಂಡ್ಸ್ ಸರ್ಕಲ್  ಸಮಾಜ ಸೇವೆಯ ಜತೆಗೆ ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ’ಎಂದರು.


ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘವನ್ನು ಹಾಗೂ ಯಕ್ಷಗಾನ ಪ್ರತಿಭೆ ರೇವತಿ ನವೀನ್  ಮತ್ತು ಪ್ರತಿಭಾವಂತ ವಿದ್ಯಾರ್ಥಿ ಅನಘ ಐತಾಳ್  ಇವರುಗಳನ್ನು ಸನ್ಮಾನಿಸಲಾಯಿತು. ಸುರೇಖ ಹರಿಶ್ಚಂದ್ರ, ಪೂರ್ಣಿಮಾ ಐತಾಳ್ ಮತ್ತು  ಅನುಶ್ರೀ ಹರ್ಷಿತ್  ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು.


ಸಂಸ್ಥೆಯ ಗೌರವ ಸಲಹೆಗಾರ ಎಂ. ಜೆ. ಶೆಟ್ಟಿ , ಅಧ್ಯಕ್ಷ ದೀಪಕ್ ಕುಳಾಯಿ, ಗೌರವಾಧ್ಯಕ್ಷ  ರಾಜೇಂದ್ರನ್, ಉದ್ಯಮಿ ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ವರದಿ ವಾಚಿಸಿದರು. ಯಜ್ಞೇಶ್ ಐತಾಳ್ ಸ್ವಾಗತಿಸಿ,  ಕೋಶಾಧಿಕಾರಿ ಆಶಿತ್ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ನಾಟಕ ಪ್ರದರ್ಶನಗೊಂಡಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top