ಮಂಗಳೂರು: ಸರಯೂ ಬಾಲ ಯಕ್ಷ ವೃಂದ(ರಿ) ಮಕ್ಕಳ ಮೇಳ ಇದರ ರಜತೋತ್ಸವ ಸಮಾರಂಭ (2000-2025) ಮೇ ತಿಂಗಳ 16ರಿಂದ ಜೂನ್ 1ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಗುರುವಾರ (17.4.25) ದೇರೇಬೈಲ್ ತೋಟದ ಮನೆಯ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವಳದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ, ವಾರ್ಡಿನ ಮಾಜಿ ಮನಪಾ ಸದಸ್ಯೆ ರಂಜಿನಿ ಎಲ್. ಕೋಟ್ಯಾನ್, ದೇವಳದ ಪದಾಧಿಕಾರಿಗಳು, ನಾಗರಾಜ ಖಾರ್ವಿ, ಮಧುಸೂದನ ಅಲೆವೂರಾಯ ವರ್ಕಾಡಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ದಂಪತಿ, ಗೌತಮ್ ಭಂಡಾರಿ ದಂಪತಿ, ರಾಘಣ್ಣ,ಯೋಗೀಶ್, ವರ್ಕಾಡಿ ರವಿ ಅಲೆವೂರಾಯ, ಪ್ರತೀಕ್ ರಾವ್, ಕು. ಸೈಶಾ ಭಂಡಾರಿ, ಹಂಸಿಕಾ, ಕೃತಿ ದೇವಾಡಿಗ, ಗೌರವ್ ಕೊಂಚಾಡಿ, ವಿಜಯಲಕ್ಷ್ಮಿ ಎಲ್. ಎನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ