ಮಂಗಳೂರು: ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿರುವ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ರಕ್ತೇಶ್ವರಿ ದೈವಸ್ಥಾನದಲ್ಲಿ ರಕೇಶ್ವರಿ, ಪಂಜುರ್ಲಿ, ಧರ್ಮ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ ಎಪ್ರಿಲ್ 22 ಹಾಗೂ 23 ರಂದು ನಡೆಯಲಿದೆ.
ಕಾರೀಜೇಶ್ವರ ದೇವಸ್ಥಾನ ವಗ್ಗ ಬಳಿಯಲ್ಲಿ ಪ್ರಾಚೀನ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ನೆಲ್ಲಿಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದ ಜೀರ್ಣೋದ್ಧಾರ ಪೂರ್ಣಗೊಂಡಿದ್ದು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ ಎಂದು
ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.
ಎ.22 ಮಂಗಳವಾರ ಸಂಜೆ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಬಲಿ ಪ್ರಧಾನ, ದೈವಾಲಯದ ಶುಚೀಕರಣ ಕ್ರೀಯೆ ನಡೆಯಲಿದೆ. ಎ.23ರಂದು ಬೆಳಗ್ಗೆ 8.45ಕ್ಕೆ ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ, ಸಾನಿಧ್ಯ ಹವನ, ಪ್ರತಿಷ್ಠಾಹ ವನ, ಬ್ರಹ್ಮ ಕಲಶ ಅಭಿಷೇಚನ, ಪ್ರಸನ್ನ ಪೂಜೆ, ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.
ಶ್ರೀ ರಕ್ತೇಶ್ವರಿ ದೈವಸ್ಥಾನದ ಕುರಿತು:
ಅನಾದಿಕಾಲದಿಂದಲೂ ಈ ಮಣ್ಣಿನಲ್ಲಿ ನೆಲೆ ನಿಂತ ರಕ್ತೇಶ್ವರಿ ದೇವಿ, ದುರ್ಗಾ ಪರಮೇಶ್ವರಿ, ಸನಾತನ ಹಿಂದೂ ದೇವಾಲಯಗಳಲ್ಲಿ ಪೂಜಿಸಲ್ಪಡುವ ಬ್ರಹ್ಮಾಂಡದ ದೈವಿಕ ಮಾತೃ ಶಕ್ತಿ ದೇವತೆ.
ಅನಾದಿ ಕಾಲದಿಂದಲೂ ಕಾರಿಂಜೇಶ್ವರನ ಸಾನಿಧ್ಯಕ್ಕೆ ಸೇರಿದ ನೆಲ್ಲಿಗುಡ್ಡೆ ಪರಿಸರದ ಮಣ್ಣಿನಲ್ಲಿ ನೆಲೆ ನಿಂತ ರಕ್ತೇಶ್ವರಿ ದೇವಿ, ಈ ಶಕ್ತಿದೇವತೆ ಯನ್ನು ನೆಲ್ಲಿಗುಡ್ಡೆ ಪರಿಸರದಲ್ಲಿ ಆರಾಧನೆ ಮಾಡಿಕೊಂಡು ಬಂದ ಐತಿಹ್ಯವಿದೆ. ಆದರೆ ಕಾಲಾಂತರದಲ್ಲಿ ಈ ಆರಾಧನೆ ನಡೆಯಬೇಕಾದ ಪರ್ವ ಕಾಲದಲ್ಲಿ ನಡೆಯದೆ ಇರುವುದರಿಂದ ಕೆಲವೊಂದು ದೋಷಗಳು ಪರಿಸರದಲ್ಲಿ ಕಂಡು ಬಂದವು. ಈ ಬಗ್ಗೆ ಪ್ರಶ್ನೆ ಯಲ್ಲಿ ನೆಲ್ಲಿಗುಡ್ಡೆಯಲ್ಲಿ ಈಗ ಇರುವಷ್ಟೇ ದೊಡ್ಡದಾದ ರಕ್ತೇಶ್ವರಿಯ ಹೊಸ ಗುಡಿಯನ್ನು ನಿರ್ಮಿಸಬೇಕು. ಹೊಸದಾದ ಬಿಂಬ ಪ್ರತಿಷ್ಠಾಪನೆಯಾಗಬೇಕು.
ದೇವಿಯ ನಿರಂತರ ಉಪಾಸನೆ, ಪ್ರಾರ್ಥನೆಯ ಮೂಲಕ ರಕ್ತೇಶ್ವರಿ ಗುಡಿಯ ಜೀರ್ಣೋದ್ಧಾರ ನಡೆಯಬೇಕು. ಪ್ರತಿ ಸಂಕ್ರಮಣದಂದು ಪೂಜೆ ನಡೆಯಬೇಕು ಎಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಶ್ರೀಕಾರಿಂಜೇಶ್ವರನ ಅನುಗ್ರಹ ಬೇಡಿಕೊಂಡು ಶಕ್ತಿ ದೇವತೆ ರಕ್ತೇಶ್ವರಿಯ ಜೀರ್ಣೋದ್ದಾರ, ಬಿಂಬ ಪ್ರತಿಷ್ಠಾಪನೆ ಸೇರಿದಂತೆ ಕಾಲ ಕಾಲಕ್ಕೆ ದೈವಿಕ ಸಂಸ್ಕಾರr ವನ್ನು ನಡೆಸಿಕೊಂಡು ಬರಲು ನಿರ್ಧರಿಸಿ ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಇದೀಗ
ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಶ್ರೀನಿವಾಸ ನಾಯಕ್ ಇಂದಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ