ಐಟಿಐ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ

Upayuktha
0

 


ಮಂಗಳೂರು/ ಉಡುಪಿ: ಸಿಡಿಎಸ್‍ಎಲ್ ಇನ್ವೆಸ್ಟರ್ ಪ್ರೊಟೆಕ್ಷನ್ ಫಂಡ್ (ಸಿಡಿಎಸ್‍ಎಲ್ ಐಪಿಎಫ್) ಸಂಸ್ಥೆಯು ಉಡುಪಿ ಜಿಲ್ಲೆ ಮಣಿಪಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹೂಡಿಕೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.


ವಿದ್ಯಾರ್ಥಿಗಳು ಆರ್ಥಿಕ ಸಾಕ್ಷರತೆ ಗಳಿಸಲು ಪ್ರೊತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಮೂಲಕ ಹೂಡಿಕೆದಾರರಿಗೆ ಮೂಲಧನ ಮಾರುಕಟ್ಟೆಯಲ್ಲಿ ತಮ್ಮ ಹೂಡಿಕೆಗಳ ಕುರಿತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನೆರವಾಗಲಿದೆ. ಜೊತೆಗೆ ಹೂಡಿಕೆಯ ಮೂಲಭೂತ ತತ್ವಗಳನ್ನು ವಿವರಿಸಲಾಯಿತು.


ವಿದ್ಯಾರ್ಥಿಗಳಿಗೆ ಹೂಡಿಕೆಯ ಪರಿಕಲ್ಪನೆಗಳನ್ನು ಸರಳ ಕನ್ನಡದಲ್ಲೇ ತಿಳಿಸಲಾಯಿತು. ಮೂಲಧನ ಮಾರುಕಟ್ಟೆ ಮತ್ತು ಡಿಪಾಸಿಟರಿ ಸೇವೆಗಳ ಪ್ರಾಥಮಿಕ ಪರಿಚಯ ಎಂಬ  ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರವಾಗಿ ಮಾತನಾಡಿದರು.


ಹೂಡಿಕೆದಾರರಿಗೆ ಶಿಕ್ಷಣ ಒದಗಿಸುವ ಈ ಕ್ರಮವು ಮೂಲಧನ ಮಾರುಕಟ್ಟೆಯಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿಡಿಎಸ್‍ಎಲ್ ಐಪಿಎಫ್ ಸಂಸ್ಥೆಯು ಈ ಮೂಲಕ ಹೂಡಿಕೆದಾರರಿಗೆ ಮೂಲಧನ ಮಾರುಕಟ್ಟೆಯ ಸವಾಲುಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸಲು ಮತ್ತು ಆತ್ಮನಿರ್ಭರಹೂಡಿಕೆದಾರ ಆಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು  ವಿವರಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top