ನಾವು ಕನ್ನಡದ ಋಣ ತೀರಿಸಬೇಕು: ರೇಮಂಡ್ ಡಿಕೂನಾ ತಾಕೊಡೆ

Upayuktha
0


ಮಂಗಳೂರು: ನಾವು ಕರ್ನಾಟಕದಲ್ಲಿ ಜೀವನ ಮಾಡುವವರು ಇಲ್ಲಿನ ಸಂಪನ್ಮೂಲಗಳ ಉಪಯೋಗ ಮಾಡಿಕೊಂಡು ನಮ್ಮ ಜೀವನ ನಡೆಸುತ್ತವೆ. ಹೀಗಿರುವಾಗ ಕನ್ನಡದ ಋಣ ತೀರಿಸಲು ನಮಗೆ ಕರ್ತವ್ಯ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ನಗರ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ನುಡಿದರು.


ಅವರು  ದ.ಕ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಇಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಮಾತೃಭಾಷೆ ಬೇರೆ ಇರಬಹುದು ಆದರೆ ಕರ್ನಾಟಕದಲ್ಲಿ ಜೀವನ ಮಾಡುವಾಗ ಕನ್ನಡ ಪಾಲು ಪಡೆದು ನಮ್ಮ ಸಹೋದರ ಭಾಷೆಗಳನ್ನು ಉಳಿಸುತ್ತೇವೆ ಎಂದು ನೆನಪಿಡಬೇಕು ಎಂದು ನುಡಿದರು.


ಡಯಟ್ ಸಂಸ್ಥೆಯ ಪ್ರಾಂಶುಪಾಲೆ ಮತ್ತು ನಿರ್ದೇಶಕಿ ರಾಜಲಕ್ಷ್ಮಿ ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಸಂಘ ಆರಂಭ ಮಾಡುವುದು ನಮ್ಮ ಹಲವು ದಿನಗಳ ಆಶೆಯಾಗಿತ್ತು. ನಾವು ಕಾರ್ಯಕ್ರಮ ಹಿಂದೆಯೂ ಮಾಡುತ್ತಿದ್ದೆವು. ಈಗ ಆಧಿಕೃತವಾಗಿ ಉದ್ಘಾಟನೆಗೊಂಡಿದೆ ಎಂದರು.


ತರಬೇತಿ ವಿಭಾಗದ ಹಿರಿಯ ಪ್ರಾಧ್ಯಾಪಕಿ ಫಾತಿಮಾ, ಕನ್ನಡತನವೇ ಎಲ್ಲಾ ಕನ್ನಡ ನಾಡಿನಲ್ಲಿ ಜೀವಿಸುವ ಜನರಿಗೆ ಆಸ್ಮಿತೆಯಾಗಿದೆ ಮತ್ತು ಸಹೋದರತೆ ಆಗಿದೆ ಎಂದರು.


ಶಿಕ್ಷಣ ಸಂಸ್ಥೆಯ ಹಿರಿಯ ತರಬೇತುದಾರ ಪ್ರಾದ್ಯಾಪಕ ಪೀತಾಂಬರ ಅವರು ಪ್ರಾಸ್ತಾವಿಕ ಮಾತನಾಡಿ, ಕಸಾಪ ಮೈಸೂರು ಮಹಾರಾಜ ಅವರು ಕಟ್ಟಿ ಬೆಳೆಸಿದ ಬಗ್ಗೆ ಮತ್ತು ಈಗಿನ ಅಧ್ಯಕ್ಷರು ಜೋಶಿಯವರ ಬಗ್ಗೆಯೂ, ಕಸಾಪದ ಬಗ್ಗೆಯೂ ವಿವರ ನೀಡಿ ಸಂಸ್ಥೆಯ ಎಲ್ಲರೂ ಸದಸ್ಯರಾಗಿ ಎಂದು ಕರೆ ನೀಡಿದರು.


ಮೊದಲಿಗೆ ತರಬೇತಿ ಸಂಸ್ಥೆಯ ದ್ವಿತೀಯ ವರ್ಷದ  ವಿದ್ಯಾರ್ಥಿ ಪುನೀತ್ ಸ್ವಾಗತಿಸಿ ಸುಮೀರ ವಂದಿಸಿದರು. ಫಾತುಮ್ಮ ಬಿ ನಿರೂಪಿಸಿದರು. ಪ್ರಾಧ್ಯಾಪಕಿ ವಿಜಯಲಕ್ಷ್ಮಿ, ಚಂದ್ರಾವತಿ, ಅಡಿಗ, ರಾಜಲಕ್ಷ್ಮಿ, ಅನಿತಾ ಮತ್ತು ಮನೋಜ್ ಶಿಬಾರ್ಲ ಸಹಕರಿಸಿ ವಿವಿಧ ಸ್ಪರ್ಧೆಗಳು ನಡೆಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top