ರಾಜ್ಯದಲ್ಲಿ ನಿರಂತರ ಹತ್ಯೆ , ಅತ್ಯಾಚಾರ ಪ್ರಕರಣ ,ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲ : ಪ್ರಭಾಕರ ಪ್ರಭು

Upayuktha
0



ಮಂಗಳೂರು: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಾನವ ಹತ್ಯೆ ,ಮಹಿಳೆಯರ ಮೇಲೆ ಅತ್ಯಾಚಾರ ,ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರ ಕೊಲೆ ಪ್ರಕರಣ ,ಪೋಲಿಸ್ ಠಾಣೆಗಳ ಮೇಲೆ ಸರಣಿ ದಾಳಿ ಪ್ರಕರಣ ,ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ,ಅಂಗಡಿ,ಮಳಿಗೆಗಳು,ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ಸೇರಿದಂತೆ ಹತ್ತು ಹಲವಾರು ರಾಷ್ಟ್ರ ದ್ರೋಹದ ಮತ್ತು ಸಮಾಜ ದ್ರೋಹಿ ಚಟುವಟಿಕೆಗಳು ರಾಜ್ಯಾದಾದ್ಯಂತ ನಡೆಯುತ್ತಿದರೂ ಸಹ ಪೋಲಿಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರ ಹಿಂದೆ  ರಾಜ್ಯ ಸರಕಾರದ ಕೈವಾಡ ಇರುವುದು ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡಿದೆ .


ಇದರಿಂದ ರಾಜ್ಯದಲ್ಲಿ ಸಹ ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಪರಿಸ್ಥಿತಿ ಮರುಕಳಿಸಬಹುದು ಎಂದೂ ಜನರಲ್ಲಿ ಆತಂಕ ಮೂಡಿದ್ದು,ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿ ಜೆ ಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆಯ ಮೂಲಕ ಆರೋಪಿಸಿದ್ದಾರೆ .


"ಪಿ. ಎಸ್. ಐ. ಅನ್ನಪೂರ್ಣ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಮಾದರಿ " ಹುಬ್ಬಳ್ಳಿಯಲ್ಲಿನ ಅಪ್ರಾಪ್ತ ಬಾಲಕಿ 5 ವರ್ಷದ ಕಂದಮ್ಮನೊಂದಿಗೆ ಅಸಭ್ಯವಾಗಿ ವರ್ತಿಸಿ ನಂತರ ಕೊಲೆ ಮಾಡಿ ಪೋಲಿಸರಿಂದ ತಪ್ಪಿಸಲು ,ಪೋಲಿಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಓಡಲು ಯತ್ನಿಸಿ  ಹಂತಕನ ಮೇಲೆ ಗುಂಡಿನ ಸುರಿಮಳೆಯ ದಾಳಿ ನಡೆಸಿ ಸ್ಥಳದಲ್ಲಿಯೇ ಎನ್ ಕೌಂಟರ್ ಮಾಡಿದ ಹುಬ್ಬಳ್ಳಿಯ  ಆಶೋಕ ನಗರ ಪಿ.ಎಸ್.ಐ ಅನ್ನಪೂರ್ಣರವರ  ಸಾಹಸ ಮತ್ತು ತಕ್ಷಣವೇ ತೋರಿದ ಧೈರ್ಯ ಮತ್ತು ಸ್ಥೈರ್ಯ ರಾಜ್ಯದ ಇತರ ಪೋಲಿಸ್ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಪಿ.ಎಸ್.ಐ ಅನ್ನಪೂರ್ಣರವರು ತೋರಿಸಿದ ಕಾರ್ಯವನ್ನು ರಾಜ್ಯದ ಎಲ್ಲಾ ಕಡೆಗಳಲ್ಲಿನ ಇತರ ಪೋಲಿಸ್ ಅಧಿಕಾರಿಗಳು ಈ ಮೊದಲು ತೋರಿಸುತ್ತಿದ್ದರೆ ರಾಜ್ಯದಲ್ಲಿ ಅದೆಷ್ಟೋ ಕ್ರಿಮಿನಲ್ ಪ್ರಕರಣ ಕಡಿಮೆಯಾಗುವುದರ ಜೊತೆಗೆ ಸರಕಾರದ ಆಸ್ತಿ-ಪಾಸ್ತಿ ಉಳಿಕೆಯಾಗುತ್ತಿತ್ತು. ಪ್ರಾಣ ಹಾನಿ ,ಅತ್ಯಾಚಾರಗಳು,ಕೊಲೆ ಸಂಬಂಧ ಪ್ರಕರಣಗಳು ಕಡಿಮೆ ಆಗುತ್ತಿದ್ದವು . ಪೋಲಿಸ್ ಅಧಿಕಾರಿ ಮತ್ತು ಪೋಲಿಸ್ ಠಾಣೆಗಳ ಮೇಲಿನ ಸರಣಿ ದಾಳಿಗಳು ಮತ್ತೆ ಮತ್ತೆ ಮರುಕಲಿಸುತ್ತೀರಲಿಲ್ಲ ಹಾಗೂ ರಾಜ್ಯದಲ್ಲಿನ ಅದೆಷ್ಟೋ ಮುಗ್ದ ಜೀವಗಳು ಸಾವಿನಿಂದ ಬದುಕಿ ಉಳಿಯುತ್ತಿದ್ದವು.


ಇನ್ನಾದರೂ ರಾಜ್ಯದಲ್ಲಿನ ಪೋಲಿಸ್ ಅಧಿಕಾರಿಗಳು ಕಾನೂನು ಕೈಗೆತ್ತಿ ಕೊಳ್ಳುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಮೂಲಕ ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕ ವಲಯದಲ್ಲಿ ನಂಬಿಕೆ ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಬೇಕು ಎಂದು ಪೋಲಿಸ್ ಅಧಿಕಾರಿಗಳಿಗೆ  ವಿನಂತಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top