ನಾಳೆಯಿಂದ ಸಿಇಟಿ- ದ.ಕ ಜಿಲ್ಲೆಯಲ್ಲಿ 22525 ವಿದ್ಯಾರ್ಥಿಗಳು

Chandrashekhara Kulamarva
0



ಮಂಗಳೂರು: ವೃತ್ತಿಪರ ಶಿಕ್ಷಣ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ಬುಧವಾರ ಪ್ರಾರಂಭವಾಗಲಿದ್ದು, ದ.ಕ ಜಿಲ್ಲೆಯಲ್ಲಿ 22525 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿದ್ದಾರೆ. ಜಿಲ್ಲೆಯಲ್ಲಿ 43 ಪರೀಕ್ಷಾ ಕೇಂದ್ರಗಳಿವೆ. ಮಂಗಳೂರು-27, ಮೂಡಬಿದ್ರೆ- 8, ಪುತ್ತೂರು -4, ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 4 ಕೇಂದ್ರಗಳಿವೆ.


ಏಪ್ರಿಲ್ 16ರಂದು ಬೆಳಿಗ್ಗೆ- ಭೌತಶಾಸ್ತ್ರ, ಮಧ್ಯಾಹ್ನ- ರಸಾಯನಶಾಸ್ತ್ರ, ಏಪ್ರಿಲ್ 17 ರಂದು ಬೆಳಿಗ್ಗೆ- ಗಣಿತ ಹಾಗೂ ಮಧ್ಯಾಹ್ನ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.


ಪರೀಕ್ಷೆ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾ ಪಂಚಾಯತ್‍ನಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಏರ್ಪಡಿಸಲಾಗಿದೆ.

ಕನ್ನಡ ಪರೀಕ್ಷೆ: ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿರುವ ಹೊರನಾಡ ಕನ್ನಡಿಗರಿಗೆ ಮಂಗಳವಾರ ಕನ್ನಡ ಭಾಷೆ ಪರೀಕ್ಷೆ ಮಂಗಳೂರಿನಲ್ಲಿ ನಡೆಯಿತು. ಒಟ್ಟು 655 ವಿದ್ಯಾರ್ಥಿಗಳಲ್ಲಿ 549 ಮಂದಿ ಹಾಜರಾಗಿದ್ದು, 106 ಮಂದಿ ಗೈರು ಹಾಜರಾಗಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top