ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಿಬೈಲು ಮನೆಯೇ ಗ್ರಂಥಾಲಯ ಅಭಿಯಾನ ಕಾರ್ಯಕ್ರಮ ಶಾಲೆಯಲ್ಲಿ ಎ.5 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಪರಿಷತ್ ನ ವಿವಿಧ ಕಾಯ೯ಕ್ರಮ ಮತ್ತು ಮುಂದಿನ ಯೋಜನೆಗಳ ವಿವರ ನೀಡಿದರು.ಈ ಸಂದಭ೯ದಲ್ಲಿ ಶಾಲಾ ಮುಖ್ಯ ಶಿಕ್ಷಕಿಯವರಿಗೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಅಧ್ಯಕ್ಷರಾದ ಪ್ರೊ. ಮುರಳಿಧರ್ ಉಪಾಧ್ಯ ಹಿರಿಯಡ್ಕ, ಶಾಲಾ ಮುಖ್ಯ ಶಿಕ್ಷಕಿ ನಿಮ೯ಲಾ, ನಿವೃತ್ತ ಶಿಕ್ಷಕಿ ಶಾರದ ಉಪಾಧ್ಯ 'ತಾಲೂಕು ಗೌರವ ಕಾಯ೯ದಶಿ೯ ರಂಜಿನಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ತಾಲೂಕು ಮಾಧ್ಯಮ ಪ್ರತಿನಿಧಿ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಮುಂತಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ