ಏಪ್ರಿಲ್ 13ರಂದು ಮಂಗಳೂರಿನಲ್ಲಿ ಕುಲಾಲ ಪರ್ಬ

Upayuktha
0

ಕುಲಶೇಖರ ಶ್ರೀ ವೀರನಾರಾಯಣ ದೇವಾಲಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ




ಮಂಗಳೂರು: ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಏಪ್ರಿಲ್ 13 ರಂದು ಮಂಗಳೂರಿನ ಉರ್ವಸ್ಟೋರ್ ಬಳಿ ಇರುವ ಅಂಬೇಡ್ಕರ್ ಸಭಾ ಭವನದಲ್ಲಿ ಮಧ್ಯಾ,ಹ್ನ 2 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಡೆಯಲಿರುವ ಕುಲಾಲ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು  ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. 


ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳದೇವಿ ಮಾತನಾಡಿ, ಸಮಾಜಕ್ಕೆ ಶಕ್ತಿ ತುಂಬುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿಕೊಂಡಿದ್ದೇವೆ. ಮುಂಬೈಯ ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ದಂಪತಿಯನ್ನು ಸನ್ಮಾನಿಸಲು ಎಂದು ತಿಳಿಸಿದರು. 


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್, ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಎ ದಾಮೋದರ್‌, ಕಿರಣ್ ಅಟ್ಲೂರ, ಮಾಸ್ಟರ್ ಸೀತಾರಾಮ ಕುಲಾಲ, ನಾಗೇಶ ಕುಲಾಲ್, ದಿನೇಶ್ ಕುಲಾಲ್, ಪ್ರೇಮಾನಂದ ಕುಲಾಲ್, ಆನಂದ್ ಉರ್ವ, ಗೋಪಾಲ್ ಬಂಗೇರ, ಸದಾಶಿವ ಬಿಜೈ, ಮೋಹನದಾಸ ಅಳಪೆ, ನರಿಕೊಂಬ ಕುಲಾಲ ಸಂಘದ ನಾಗೇಶ್ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top