ಬಾಗಲಕೋಟೆ: ಬಾಗಲಕೊಟೆ ತಾಲೂಕಿನ ಕಿರಸೂರ ಗ್ರಾಮದ ಲಿಂ ಶ್ರೀ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆಯ ನಿಮಿತ್ತ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ, ಸಕಲವಾದ್ಯ ಮೇಳದೊಂದಿಗೆ ಮಹಾರಥೋತ್ಸವವು ಕಿರಸೂರನಲ್ಲಿ ಜರುಗಿತು.
ಮುಂಜಾನೆ 6 ಗಂಟೆಗೆ ಗೌರಿಶಂಕರ ಕೃರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ಸಕಲವಾದ್ಯ ಮೇಳದೊಂದಿಗೆ ಪಾಲಿಕೆ ಉತ್ಸವ ಕಳಸದ ಮೆರವಣಿಗೆಯು ಸುಮಂಗಲಿಯರಿ೦ದ ಕುಂಭಮೇಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮಠಕ್ಕೆ ತಲುಪಿತು.
ಪುಣ್ಯ ಸ್ಮರಣೆಯ ನಿಮಿತ್ಯ ಶ್ರೀಮಠದ ಲಿಂ. ಗೌರಿಶಂಕರ ಮಹಾಸ್ವಾಮಿಗಳು ತಮ್ಮ ಜೀವಂತ ಅವಧಿಯಲ್ಲಿ ಪ್ರಾರಂಭವಾದ, ಐದು ದಿವಸದ ಜಪಯಜ್ಞ ಕಾರ್ಯಕ್ರಮವನ್ನು ಗುಳೇದಗುಡ್ಡದ ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಮರುಳಾರಾಧ್ಯ ಶ್ರೀಗಳು ನೇತೃತ್ವದಲ್ಲಿ ಮುಂಜಾನೆ 10 ಘಂಟೆಗೆ ಮಂಗಲಗೊಳಿಸಿದ್ದರು.
ಸಾಯಂಕಾಲ ಜರುಗಿದ ಮಹಾರಥೋತ್ಸವಕ್ಕೆ ಮನ್ನಿಕಟ್ಟಿ ಗ್ರಾಮದ ಸದ್ಭಕ್ತರಿಂದ ತೇರಿನ ಕಳಸ, ಮುಗಳೊಳ್ಳಿ ಗ್ರಾಮದ ಸದ್ಭಕ್ತರಿಂದ ತೇರಿನ ಹಗ್ಗ, ಬದಾಮಿ ತಾಲೂಕಿನ ಸುಳ್ಳ ಮತ್ತು ಮುದೇನೂರ ಗ್ರಾಮದ ಸದ್ಭಕ್ತರಿಂದ ನಂದಿಕೋಲು ಹಾಗೂ ತೇರಿನ ರುದ್ರಾಕ್ಷಿಮಾಲೆ ಭಗವತಿ ಗ್ರಾಮದ ಸದ್ಭಕ್ತರಿಂದ ಬಾಳೆ ಕಂಬ ಮೆರವಣಿಗೆ ಮೂಲಕ ತಲುಪಿದ ನಂತರ ಗುಳ್ಳೇದಗುಡ್ಡ ಗ್ರಾಮದ ದಾನಿಗಳಾದ ಸದಾಶಿವಯ್ಯ ಎಸ್. ವಸ್ತ್ರದ ಅವರು ನಿರ್ಮಿಸಿ ಕೊಟ್ಟಿರುವ ಭವ್ಯವಾದ ರಥವನ್ನು ಪ್ರತಿ ವರ್ಷದಂತೆ 13ನೇ ವರ್ಷದ ರಥೋತ್ಸವವನ್ನು ಮುತ್ತತ್ತಿ ಗುರುಲಿಂಗ ಶಿವಾಚಾರ್ಯರು ಉದ್ಘಾಟಿಸಿದರು.
ಬಿಲ್ ಕೆರೂರಿನ ಸಿದ್ದಲಿಂಗ ಶಿವಾಚಾರ್ಯರು, ಇಟಗಿ ಗುರು ಶಾಂತವೀರ ಶಿವಾಚಾರ್ಯರು, ಪ್ರವಚನಕಾರರಾದ ಸೌದತ್ತಿ ತಾಲೂಕಿನ ಕಗದಾಳ ಗ್ರಾಮದ ವೀರಭದ್ರ ಸ್ವಾಮಿಗಳು, ಶ್ರೀಮಠದ ಅರ್ಚಕ ಸಂಗಯ್ಯ ಹಿರೇಮಠ, ಶ್ರೀಮಠದ ಟ್ರಸ್ಟ್ ಕಮಿಟಿಯ ಅಧ್ಯಕ್ಷ ನಾಗಪ್ಪ ಮೇಟಿ, ಕಾರ್ಯದರ್ಶಿ ಷಣ್ಮುಖ ಅಂಗಡಿ, ಗ್ರಾಮದ ಮುಖಂಡರಾದ ಬಸವರಾಜ ಆನಗವಾಡಿ, ಶಿವಾನಂದ ಮಲ್ಲಾಪುರ ಬಸವರಾಜ ಡುಗ್ಗಿ, ಹುಚ್ಚಪ್ಪ ವಾಗಿನಗೇರಿ, ದುಂಡಯ್ಯ ಅಳದೂರು, ಮಠ ರಂಗಪ್ಪ ಕೆಲುಡಿ, ರಂಗಪ್ಪ ಕಟಗಿ, ಶ್ರೀಮತಿ ಅಶ್ವಿನಿ ಪೂಜಾರಿ ಗ್ರಾಮದ ಪ್ರಮುಖರು ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ಸಾವಿರಾರು ಭಕ್ತರು ಹಗ್ಗ ಎಳೆಯುವದರ ಮೂಲಕ ಸಡಗರ ಸಂಭ್ರಮದಿಂದ ವಿವಿಧ ವಾದ್ಯ ಮೇಳಗದೊಂದಿಗೆ ಮಹಾ ರಥೋತ್ಸವ ಜರುಗಿತು,
ಶ್ರೀಮಠಕ್ಕೆ ಭಕ್ತರ ದಂಡು ಪುಣ್ಯ ಸ್ಮರಣೀಯ ನಿಮಿತ್ಯ ದರ್ಶನ ಪಡೆದು ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ನಂತರ ಕಮಿಟಿ ಅವರಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಶ್ರೀಗಳು ನಡೆದಾಡಿದ ಈ ಸ್ಥಳ ಅವರ ಮಾತುಗಳು ಹಿಂದಿಗೂ ಪ್ರಚಲಿತದಲ್ಲಿವೆ ಶ್ರೀಗಳು ಆಯುರ್ವೇದಿಕ ವೈದ್ಯರಾಗಿದ್ದಲ್ಲದೆ ಅವರಿಂದ ಹಲವಾರು ಭಕ್ತರ ರೋಗಗಳನ್ನು ಕಳೆದಿದ್ದಾರೆ ನಮ್ಮ ಕುಟುಂಬವು ಸಹ ಶ್ರೀಮಠದ ಭಕ್ತರಾಗಿದ್ದೇವೆ, ಶ್ರೀ ಮಠಕ್ಕೆ ಬೆಳಿಗ್ಗೆಯಿಂದ ನೂರಾರು ಭಕ್ತರು ಆಗಮಿಸಿ ಶ್ರೀ ಗೌರಿಶಂಕರ ಗದ್ದುಗೆಗೆ ಭಕ್ತಿಯ ನಮನ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.
ರಥೋತ್ಸವದಲ್ಲಿ ಕಿರಸೂರ ಮುದೇನೂರು ಬದಾಮಿ ತಾಲೂಕಿನ ಸುಳ್ಳ ಮುಗುಳುಳ್ಳಿ ಭಗವತಿ ಹಳ್ಳೂರ್, ಬೇವೂರ್, ಹೊನ್ನಕಟ್ಟಿ, ಮನ್ನಿಕಟ್ಟೆ ಬಾಗಲಕೋಟ್, ಗುಳೇದಗುಡ್ಡ, ಗದಗ ಸೇರಿದಂತೆ ರಾಜ್ಯದ ವಿವಿಧತೆಯಿಂದ ಆಗಮಿಸಿದ್ದ ಭಕ್ತರು, ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ