ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ ಖಾಲಿ ಇರುವ ಅಗತ್ಯ ಹಿರಿಯ ಭಾಷಾಂತರ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದು.
ಮೇ 18, 2025 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳು, ವಿಶ್ವವಿದ್ಯಾಲಯಗಳು, ಅಂಗೀಕೃತ ಸಂಶೋಧನಾ ಸಂಸ್ಥೆಗಳು, ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕನ್ ಸಂಸ್ಥೆಗಳು ಅಥವಾ ಸರ್ಕಾರಿ ಅಂಗ ಸಂಸ್ಥೆಗಳು ಅಥವಾ ಸ್ವಾಯತ್ತ ಸಂಸ್ಥೆಗಳಲ್ಲಿ ಪೂರ್ಣಕಾಲಿಕ ಅಧಿಕಾರಿ ಹುದ್ದೆಗಳಿಗೆ ಸೇರಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವವರು ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ, ಪದವಿ ಶಿಕ್ಷಣವನ್ನು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಓದಿರಬೇಕು. ಹಿಂದಿಯಿಂದ ಇಂಗ್ಲಿಷ್‌ಗೆ ಅಥವಾ ಇಂಗ್ಲಿಷ್‌ನಿಂದ ಹಿಂದಿಗೆ ಭಾಷಾಂತರ ಮಾಡಿದ ಎರಡು ವರ್ಷ ಅನುಭವ ಬೇಕು.
ಈ ಹುದ್ದೆಗಳನ್ನು ಕೇಂದ್ರ ಆದಾಯ ತೆರಿಗೆ ಇಲಾಖೆಯ ಗುಜರಾತ್, ಕರ್ನಾಟಕ, ಗೋವಾ, ಒಡಿಶಾ, ಎನ್‌ಡಬ್ಲ್ಯೂಆರ್, ತಮಿಳುನಾಡು, ಪುದುಚೇರಿ, ದೆಹಲಿ, ಕೇರಳ, ಮುಂಬೈ, ಪುಣೆ ವಲಯ ಘಟಕಗಳಲ್ಲಿ ಭರ್ತಿ ಮಾಡಲಾಗುತ್ತಿದೆ.
ಅರ್ಜಿಯನ್ನು ಆದಾಯ ತೆರಿಗೆ ನಿರ್ದೇಶನಾಲಯ (ಹೆಚ್‌ಆರ್‌ಡಿ), ಕೇಂದ್ರ ನೇರ ತೆರಿಗೆ ಮಂಡಳಿ, ಅಧಿಕೃತ ಭಾಷಾ ವಿಭಾಗ, ಕೊಠಡಿ ಸಂಖ್ಯೆ 401, ಎರಡನೇ ಮಹಡಿ, ಜವಾಹರ ಲಾಲ್ ನೆಹರು ಸ್ಟೇಡಿಯಂ, ಪ್ರಗತಿ ವಿಹಾರ್, ನವದೆಹಲಿ - 110003 ಇಲ್ಲಿಗೆ ಕಳಿಸಬೇಕು. .ಅರ್ಜಿಯ ಸಾಫ್ಟ್‌ಕಾಪಿಯನ್ನು ಸ್ಕ್ಯಾನ್ ಮಾಡಿ ಇಮೇಲ್ ವಿಳಾಸ - delhi.dd.ol.hq.admin@incometax.gov.in ಗೆ ಕಳುಹಿಸಬಹುದು.
ಅಭ್ಯರ್ಥಿಗಳಿಗೆ ಗರಿಷ್ಠ 56 ವರ್ಷಮೀರಿರಬಾರದು. ಕೇಂದ್ರ ನೇರ ತೆರಿಗೆ ಮಂಡಳಿಯ ಸೀನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಹಾಗೂ ಅಧಿಕೃತ ಅಧಿಸೂಚನೆಗೆ ವೆಬ್ ವಿಳಾಸ https://incometaxindia.gov.in/ ಕ್ಕೆ ಭೇಟಿ ನೀಡಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ