ಶಿವಬಾಗ್‌ನಲ್ಲಿ ರೋಹನ್ ಗಾರ್ಡನ್ ಅಪಾರ್ಟ್‌ಮೆಂಟ್‌ಗೆ ಭೂಮಿಪೂಜೆ

Upayuktha
0


ಮಂಗಳೂರು: ರೋಹನ್ ಕಾರ್ಪೋರೇಶನ್‌ನ ಮತ್ತೊಂದು ವಸತಿ ಸಮುಚ್ಚಯ ರೋಹನ್ ಗಾರ್ಡನ್ ಯೋಜನೆಗೆ ನಗರದ ಕದ್ರಿ ಶಿವಬಾಗ್ 2ನೇ ಕ್ರಾಸ್‌ನಲ್ಲಿ ಶನಿವಾರ ಭೂಮಿಪೂಜೆ ನಡೆಯಿತು.


ಬೆಂದೂರ್ ಸೈಂಟ್ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರುಗಳಾದ ಫಾದರ್ ವಾಲ್ಟರ್ ಡಿಸೋಜ ಭೂಮಿ ಪೂಜೆ ನೆರವೇರಿಸಿ, ದೇವರ ಮೇಲೆ ಅಚಲ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಮಹತ್ಸಾಧನೆ ಮಾಡಿ ಸಮಾಜ ಸೇವೆ ಮಾಡುವ ಕನಸಿಗೆ ರೋಹನ್ ಮೊಂತೇರೊ ನಿದರ್ಶನ. ಅವರ ಎಲ್ಲ ಕನಸುಗಳೂ ನನಸಾಗಲಿ ಎಂದು ಆಶೀರ್ವಚನ ನೀಡಿದರು.


ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ರೊಹನ್ ಮೊಂತೇರೊ ಜನರ ಅಪೇಕ್ಷೆಗೆ ಪೂರಕ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿ, ಗ್ರಾಹಕರು ಸಂತೃಪ್ತರಾಗಿದ್ದರಿಂದ 15 ದಿನದಲ್ಲಿ ಮೂರನೇ ಯೋಜನೆಗೆ ಶಿಲಾನ್ಯಾಸ ನಡೆದಿದೆ. ಶೀಘ್ರ 50ನೇ ಯೋಜನೆ ಪೂರೈಸಲಿ ಎಂದು ಹಾರೈಸಿದರು.


ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಿಯೊನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ದಾಯ್ಜಿವಲ್ಡ್ ನಿರ್ದೇಶಕ ವಾಲ್ಟರ್ ನಂದಳಿಕೆ, ಯುವ ಉದ್ಯಮಿ ಮೇಘರಾಜ್ ಜೈನ್ ಮುಖ್ಯ ಅತಿಥಿಗಳಾಗಿದ್ದರು.


ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಸ್ವಾಗತಿಸಿ, ವಂದಿಸಿದರು. ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.


ರೋಹನ್ ಗಾರ್ಡನ್ ವೈಶಿಷ್ಟ್ಯ: ರೋಹನ್ ಗಾರ್ಡನ್ ಆಧುನಿಕ ವಸತಿ ಸಮುಚ್ಚಯವು ಪ್ರಕೃತಿ ಮತ್ತು ಅನುಕೂಲತೆಗಳ ಸಮ್ಮಿಲನವಾಗಿದ್ದು, ಐಶಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸಯೋಗ್ಯ ವ್ಯವಸ್ಥೆ ಒದಗಿಸಲಿದೆ.


ಐದಂತಸ್ತುಗಳ ಕಟ್ಟಡದಲ್ಲಿ 28 ಅಪಾರ್ಟ್ಮೆಂಟ್‌ಗಳಿರಲಿವೆ. ಜಿಮ್ನೇಶಿಯಂ, 24/7 ಸಿಸಿಟಿವಿ ಮತ್ತು ಸ್ಮಾರ್ಟ್ ಸೆನ್ಸರ್ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ಎಲೆಕ್ಟಿçಕ್ ವಾಹನ ಚಾರ್ಜಿಂಗ್ ಪಾಯಿಂಟ್ಸ್, ವಿಶಾಲ ಪಾರ್ಕಿಂಗ್, ಮಕ್ಕಳ ಆಟದ ಸ್ಥಳ ಮತ್ತು ಹಿರಿಯರಿಗಾಗಿ ವಿಶ್ರಾಂತಿ ಸ್ಥಳ ಇದೆ. ಫೈರ್ ಫೈಟಿಂಗ್ ವ್ಯವಸ್ಥೆ, ವೀಡಿಯೊ ಡೋರ್ ಫೋನ್ ಮತ್ತು ಎಆರ್‌ಡಿ ಅಟ್ಯಾಚ್ಡ್ ಲಿಫ್ಟ್‌ಗಳ ಸುರಕ್ಷತೆ ಒದಗಿಸಿದೆ.


1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿಎಚ್‌ಕೆ ಅಪಾರ್ಟ್ಮೆಂಟ್ ಒಳಗೊಂಡಿದ್ದು, ವಿಟ್ರಿಫೈಡ್ ಫ್ಲೋರಿಂಗ್, ಪ್ರೀಮಿಯಂ ಸ್ಯಾನಿಟರಿ ವೇರ್ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣ ಹೊಂದಿದೆ. ವಿಶಾಲವಾದ ಒಳಾಂಗಣ, ಸೊಗಸಾದ ಬಾಲ್ಕನಿಗಳು ಮತ್ತು ಸಮಕಾಲೀನ ವಾಸ್ತುಶಿಲ್ಪ ಹೊಂದಿದೆ.


ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top