'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದ ಜಾಲತಾಣ- ಗೋವಾದ ಸಿಎಂ ಪ್ರಮೋದ ಸಾವಂತರಿಂದ ಲೋಕಾರ್ಪಣೆ

Upayuktha
0



ಪಣಜಿ (ಗೋವಾ): ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ  ಬಾಳಾಜಿ ಆಠವಲೆ ಇವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಫರ್ಮಾಗುಡಿ, ಫೊಂಡಾ , ಗೋವಾ ಇಲ್ಲಿ 17 ರಿಂದ 19 ಮೇ  2025 ಈ ಸಮಯದಲ್ಲಿ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದ ಭವ್ಯ ಆಯೋಜನೆ ಮಾಡಲಾಗಿದೆ. ಈ ಮಹೋತ್ಸವದ https://SanatanRashtraShankhnad.in ಈ ಇಂಗ್ಲಿಷ್ ಭಾಷೆಯಲ್ಲಿನ ಜಾಲತಾಣದ ಉದ್ಘಾಟನೆ ಗೋವಾ ರಾಜ್ಯದ ಮುಖ್ಯಮಂತ್ರಿ  ಪ್ರಮೋದ ಸಾವಂತ ಇವರಿಂದ ಪರ್ವರಿ, ಗೋವಾ ಇಲ್ಲಿಯ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.


ಈ ಸಮಯದಲ್ಲಿ ಮುಖ್ಯಮಂತ್ರಿಗಳು ಜಾಲತಾಣದ ಅವಲೋಕನ ಮಾಡಿದರು, ಹಾಗೂ ಕಾರ್ಯಕ್ರಮಕ್ಕಾಗಿ ಶುಭಾಶಯಗಳನ್ನು ನೀಡಿದರು. ಈ ಸಮಯದಲ್ಲಿ ಈ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ' ಸ್ವಾಗತ ಸಮಿತಿಯಲ್ಲಿನ ಪೂ. ಪೃಥ್ವಿರಾಜ ಹಜಾರೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು  ರಮೇಶ ಶಿಂಧೆ ಹಾಗೂ  ಮಧುಸೂದನ ಕುಲಕರ್ಣಿ ಮತ್ತು ನ್ಯಾಯವಾದಿ ರಾಜೇಶ್ ಗಾವಕಾರ ಇವರೆಲ್ಲರೂ ಉಪಸ್ಥಿತರಿದ್ದರು.


ಈ ಜಾಲತಾಣದಲ್ಲಿ ಸನಾತನ ರಾಷ್ಟ್ರಶಂಖನಾದ ಮಹೋತ್ಸವದ ಬಗ್ಗೆ ಮಾಹಿತಿ ಉಪಲಬ್ಧ ಮಾಡಿ ಕೊಡಲಾಗುವುದು. ಪ್ರಸ್ತುತ ವೆಬ್ ಸೈಟ್ ನಲ್ಲಿ ಸನಾತನ ರಾಷ್ಟ್ರದ ಉದ್ದೇಶ : ಸನಾತನ ರಾಷ್ಟ್ರದ ಶಂಖನಾದ ಮಾಡುತ್ತಿರುವ ಭಗವಾನ್ ಕೃಷ್ಣನ ಬೋಧ ಚಿನ್ಹೆ; ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ  ಬಾಳಾಜಿ ಆಠವಲೆ ಇವರ ಪರಿಚಯ; ಸನಾತನ ಸಂಸ್ಥೆಯ ಮಾಹಿತಿ; ಕಾರ್ಯಕ್ರಮಕ್ಕೆ ಉಪಸ್ಥಿತ ಇರುವ ಸಂತರು, ಮಹಂತರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗಣ್ಯ ವ್ಯಕ್ತಿಗಳ ಮಾಹಿತಿ; ಸಾಂಸ್ಕೃತಿಕ ಕಾರ್ಯಕ್ರಮ; ಜಾನಪದ ಕಲೆ ಮುಂತಾದ ಪ್ರಾತಿನಿಧಿಕ ಚಿತ್ರಗಳನ್ನು ಇರಿಸಲಾಗಿದೆ. 


ಮುಂದೆ ಕಾರ್ಯಕ್ರಮದ ದೃಷ್ಟಿಯಿಂದ ಆಗಾಗ ಹೆಚ್ಚಿನ ಮಾಹಿತಿ ಈ ಜಾಲತಾಣದಲ್ಲಿ ಉಪಲಬ್ಧ ಮಾಡಿಕೊಡಲಾಗುವುದು. ಹಾಗೂ ಸನಾತನ ಸಂಸ್ಥೆಯ ವತಿಯಿಂದ ಈ ಮಹೋತ್ಸವಕ್ಕಾಗಿ ಧರ್ಮದಾನ ನೀಡಲು ಕರೆ ನೀಡಲಾಗಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter                                                                        

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top