ಉಡುಪಿ: ಪವಿತ್ರ ಪುಣ್ಯಕ್ಷೇತ್ರ ಹರಿದ್ವಾರದಲ್ಲಿ ವೃಂದಾವನಸ್ಥರಾಗಿ ಅನುನಿತ್ಯವೂ ಶಿಷ್ಯವೃಂದಕ್ಕೆ ಆಶೀರ್ವದಿಸುತ್ತಿರುವ ಕಾಶೀಮಠ ಗುರುಪರಂಪರೆಯ ಪರಮ ಸದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಮಹೋತ್ಸವ ನಡೆಯುತ್ತಿದೆ.
ರಜತಪೀಠಪುರವಾದ ಉಡುಪಿಯ ಗೌಡ ಸಾರಸ್ವತ ಸಮಾಜದ ಪ್ರಸಿದ್ಧ ಹಾಗೂ ಅತೀ ಪುರಾತನ ದೇವಳವಾದ ತೆಂಕುಪೇಟೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಸ್ವಾಮೀಜಿಯವರ ಸ್ವಾತಿ (ಜನ್ಮ) ನಕ್ಷತ್ರದ ಶುಭ ಸಂದರ್ಭದಲ್ಲಿ ಹಾಗೂ ಶತಮಾನೋತ್ತರ ಪಂಚವಿಂಶತಿ ದಿನಗಳ ಅಹೋರಾತ್ರಿ ಅಖಂಡ ಭಜನಾ ಮಹೋತ್ಸವ ನಡೆಯುತ್ತಿದೆ.
ಈ ಸಂದರ್ಭದಲ್ಲಿ ತೀರ್ಥ ಸರೋವರ ಮಂಟಪದ ತುತ್ತತುದಿಯಲ್ಲಿ ಗೋಧೂಳಿ ಸುಮುಹೂರ್ತದ ಶುಭ ಸಂದರ್ಭದಲ್ಲಿ, ಪಕ್ಷಿರಾಜ ಗರುಡ ಸುಖಾಸೀನವಾಗಿ ಕಂಡುಬಂದ ಕ್ಷಣವಿದು. ಈ ದೃಶ್ಯವನ್ನು ಕ್ಯಾಮರಾ ಕಣ್ಣಿನಿಂದ ಸೆರೆಹಿಡಿದವನು ಮುಕುಂದ ಕೃಪಾ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ದೀಪೇನ್ ದೀಪಕ್ ಶೆಣೈ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ