ಪುತ್ತೂರು: ಪುತ್ತೂರಿನ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಪುತ್ತೂರಿನ ಖ್ಯಾತ ವೈದ್ಯ ಡಾ. ವೈ.ಸುಬ್ರಾಯ ಭಟ್ಟರು ಆಯ್ಕೆಯಾಗಿದ್ದಾರೆ. 2025 ಎಪ್ರಿಲ್ 12, ಶನಿವಾರದಂದು ಭಾಸ್ಕರ ಬಾರ್ಯರ ಪರ್ಲಡ್ಕ ನಿವಾಸದಲ್ಲಿ ಸಂಜೆ ಗಂಟೆ 7ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ವೈ. ಸುಬ್ರಾಯ ಭಟ್ಟರು ‘ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರಾಗಿ ಸರ್ವಾದರಣೀಯರು. ಸರಕಾರಿ ಸೇವೆಯ ಮೂಲಕ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಿದ ಭಟ್ಟರು ಹಲವೆಡೆ ಸೇವೆ ಸಲ್ಲಿಸಿದ್ದು, 1993ರಿಂದ ಪುತ್ತೂರಿನಲ್ಲಿ ಪೂರ್ಣಪ್ರಮಾಣದ ಸೇವೆಯಲ್ಲಿ ನಿರತರು. ಈಗವರಿಗೆ ಎಂಬತ್ತೆರಡು ವರುಷ.
ಐವತ್ತು ಸಾವಿರಕ್ಕೂ ಮಿಕ್ಕಿ ಹೆರಿಗೆ ಹಾಗೂ ಇಪ್ಪತ್ತು ಸಾವಿರಕ್ಕೂಮಿಕ್ಕಿ ಉದರ ದರ್ಶಕ ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಎಲ್ಲಾ ‘ಅಮ್ಮಂದಿರ’ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದವರು. ಬಾರ್ಯ ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರುಷ ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ.
ಇದುವರೆಗೆ- ಬ್ರಹ್ಮಶ್ರೀ ದಿ.ಕೆಮ್ಮಿಂಜೆ ಕೇಶವ ತಂತ್ರಿ, ದಿ. ಡಾ. ಶೇಣಿ ಗೋಪಾಲಕೃಷ್ಣ ಭಟ್, ದಿ.ರಾಮದಾಸ ಸಾಮಗ, ದಿ.ಬಾರ್ಯ ಜಯಕೀರ್ತಿ ಬುಣ್ಣು, ದಿ.ಚಂದು ಮೇಸ್ತ್ರಿ ದಿ. ನಾಟಿವೈದ್ಯೆ ಅಕ್ಕು, ಪಾಕಶಾಸ್ತ್ರಜ್ಞ ದಿ.ಶ್ರೀನಿವಾಸ ಭಟ್, ಸರಾಫ್ ರಾಮಚಂದ್ರ ಆಚಾರ್ಯ, ಸಂಗೀತ ಸಾಧಕ ಕುದ್ಮಾರು ವೆಂಕಟ್ರಮಣ ಭಟ್, ಅಧ್ಯಾಪಕ ದಿ. ವಾಸುದೇವ ಮಯ್ಯ, ವೈದ್ಯ ಡಾ.ಜೆ.ಸಿ.ಅಡಿಗ, ಬರೆಪ್ಪಾಡಿ ದಿ.ಅನಂತಕೃಷ್ಣ ಭಟ್, ಉಮೇಶ ಶೆಣೈ, ಸಹಕಾರಿ ದಿ.ನಿರಂಜನ ಕುಮಾರ್, ಪ್ರೊ.ವೇದವ್ಯಾಸ, ಕೆಯ್ಯೂರು ನಾರಾಯಣ ಭಟ್, ಫಿಲೋಮಿನಾ ಇ. ಬ್ರೆಗ್ಸ್, ವೇ.ಮೂ.ಹರೀಶ್ ಉಪಾಧ್ಯಾಯ, ಪೂಕಳ ಲಕ್ಷ್ಮೀ ನಾರಾಯಣ ಭಟ್, ರಾಮಕೃಷ್ಣ ಮಿತ್ಯಾಂತ, ಮೂಡಾಯೂರು ಚಂದ್ರಶೇಖರ ದೇವಾಡಿಗ, ಕರಾಯ ಲಕ್ಷ್ಮಣ ಶೆಟ್ಟಿ ಹಾಗೂ ವೇ.ಮೂ. ಸುಬ್ರಹ್ಮಣ್ಯ ತಂತ್ರಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ