ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ರೂ. 15 ಲಕ್ಷದ ಡಿ.ಡಿ. ಯನ್ನು ಹಸ್ತಾಂತರಿಸಿದರು.
ಉಜಿರೆ: ಜನಾರ್ದನಸ್ವಾಮಿ ದೇವಸ್ಥಾನದ ಎದುರು ನಿರ್ಮಾಣಗೊಳ್ಳುತ್ತಿರುವ ಕೀರ್ತಿಶೇಷ ವಿಜಯ ರಾಘವ ಸ್ಮಾರಕ ಗೋಪುರ ನಿರ್ಮಾಣಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸಾದ ರೂಪವಾಗಿ ಮಂಜೂರು ಮಾಡಿದ 15 ಲಕ್ಷ ರೂ. ನ ಡಿ.ಡಿ. ಯನ್ನು ಡಿ. ಹರ್ಷೇಂದ್ರ ಕುಮಾರ್ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೋಹನ ಕುಮಾರ್, ರವಿ ಚಕ್ಕಿತ್ತಾಯ, ರಾಘವೇಂದ್ರ ಬೈಪಾಡಿತ್ತಾಯ, ರವೀಂದ್ರ ಶೆಟ್ಟಿ, ಮಂಜುನಾಥ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ