ಶಿಕ್ಷಣಕ್ಕೆ ಸಂಗೀತ, ಸಂಸ್ಕಾರ, ಸಂಸ್ಕೃತಿ ಸ್ಪೂರ್ತಿ: ಲತಾ ಕೇಶವ ಭಟ್ ಎಡಕ್ಕನ್

Chandrashekhara Kulamarva
0



ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡಿನ ಕಲಾಕುಂಚ ಶಾಖೆಯ ಆಶ್ರಯದಲ್ಲಿ ಇತ್ತೀಚಿಗೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ವರಾಹ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಸುಗಮ ಸಂಗೀತ ಕಾರ್ಯಾಗಾರ ದೀಪ ಹಚ್ಚುವ ಮೂಲಕ ಉದ್ಘಾಟಿಸಿ ಲತಾ ಕೇಶವ ಭಟ್ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದ ಜತೆಯಲ್ಲಿ ಶಿಕ್ಷಣಕ್ಕೆ ಸಂಗೀತ, ಸಂಸ್ಕಾರ, ಸಂಸ್ಕೃತಿ ಸ್ಪೂರ್ತಿಯಾಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಒತ್ತಡದ ನಡುವೆ ರಜಾ ದಿನಗಳಲ್ಲಿ ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಚಲನಚಿತ್ರಗೀತೆಗಳನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದು ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಸುಗಮ ಸಂಗೀತ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಕ್ಕಳಿಗೆ, ಅತಿಥಿಗಳಿಗೆ ಸ್ವಾಗತಿಸಿದರು, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಲಕೃಷ್ಣ ಚೆರುಗೋಳಿ, ಸಂಗೀತ ಸಂಪನ್ಮೂಲ ವ್ಯಕ್ರಿಗಳಾದ ಪುತ್ತೂರಿನ ಉದಯಗಾನ ಸಂಗೀತ ಶಾಲೆಯ ಶಿಕ್ಷಕಿಯರಾದ ಸುಮನಾರಾವ್ ಮತ್ತು ಕುಮಾರಿ ಸುಪ್ರಜಾ ರಾವ್ ಸಂಗೀತ ಅಚ್ಚುಕಟ್ಟಾಗಿ ಸಂಗೀತ ಸಂಪ್ರಾದಾಯಕ ರಾಗ, ತಾಳದೊಂದಿಗೆ ತರಬೇತಿ ನೀಡಿದರು. ಕೇರಳ ಗಡಿನಾಡಿನಲ್ಲಿ ಕನ್ನಡ ಮಕ್ಕಳು, ಅತ್ಯಾಸಕ್ತಿಯಿಂದ, ತಾಳ್ಮೆಯಿಂದ ಸಂಗೀತ ತರಬೇತಿ ಪಡೆದಿದ್ದು ಶ್ಲಾಘನೀಯ ಎಂದರು.


ಚೇತನ ಹೆಬ್ಬಾರ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಜಯಲಕ್ಷ್ಮಿ ಚಂದ್ರಶೇಖರ ಹೊಳ್ಳ ನಿರೂಪಿಸಿದರು. ಕೊನೆಯಲ್ಲಿ ಚಂದನ್ ಕಾರಂತ್ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top