ಕಲಾಕುಂಚ; ಬಸವ ಜಯಂತಿ ಉತ್ಸವ : ಚಿತ್ರ ಬರೆಯುವ ಸ್ಪರ್ಧೆ

Upayuktha
0



ದಾವಣಗೆರೆ: ಬಸವ ಜಯಂತಿ ಉತ್ಸವ ಸಮಿತಿ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಏಪ್ರಿಲ್ 30 ರಂದು ಬುಧವಾರ ದಾವಣಗೆರೆ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದ ಒಳಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಬಸವ ಜಯಂತಿ ಪ್ರಯುಕ್ತ ಸ್ಥಳದಲ್ಲೇ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಎಂ.ಶಿವಕುಮಾರ್ ತಿಳಿಸಿದ್ದಾರೆ. 


ಚಿತ್ರ ಬರೆಯುವ ಹಾಳೆ (ಡ್ರಾಯಿಂಗ್ ಶೀಟ್) ಉಚಿತವಾಗಿ ಕೊಡುತ್ತೇವೆ. ಇನ್ನುಳಿದ ಪರಿಕರ ಸ್ಪರ್ಧಿಗಳೇ ತರಬೇಕು. ಹಿರಿಯರು-ಕಿರಿಯರು ಯಾರಾದರೂ ಭಾಗವಹಿಸಬಹುದು. ವಮೋಮಾನದಂತೆ ವಿವಿಧ ವಿಭಾಗ ವಿಂಗಡಿಸಲಾಗುತ್ತದೆ. ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು ಹೀಗೆ ಯಾವುದೇ ಚಿತ್ರ ಬರೆಯಬಹುದು ಎಂದು ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ. 


ಹಿರಿಯರು, ಕಿರಿಯರು, ಚಿತ್ರ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮುಕ್ತವಾದ ಅವಕಾಶವನ್ನು ಸದ್ಭಳಕೆ ಮಾಡಬೇಕಾಗಿ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9945785170, 9538732777 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top