ದ್ವಿತೀಯ ಪಿಯುಸಿ ಪರೀಕ್ಷೆ-2 ಮತ್ತು 3ರ ದಿನಾಂಕ ಪ್ರಕಟ

Upayuktha
0

 



ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಮತ್ತು 3 ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದು,  ಪರೀಕ್ಷೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಏಪ್ರಿಲ್ 24 ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ 2 ಪರೀಕ್ಷೆ ನಡೆಯಲಿದ್ದು, ವಿಷಯವಾರು ವೇಳಾಪಟ್ಟಿ ಬಿಡುಗಡೆ ಮಾಡಲಾ ಗಿದೆ. ಜೂನ್ 9 ರಿಂದ 21ರವರೆಗೆ ಪರೀಕ್ಷೆ -3 ನಡೆಯಲಿದ್ದು, ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. 


ಯಾವುದೇ ನಿರ್ದಿಷ್ಟ ವಿಷಯ ಅಥವಾ ಎಲ್ಲಾ ವಿಷಯಗಳಿಗೂ ಮತ್ತೆ ಪರೀಕ್ಷೆ ಬರೆದರೂ ವಿದ್ಯಾರ್ಥಿ ಪರೀಕ್ಷಾ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


ಪರೀಕ್ಷೆ-2 ವೇಳಾಪಟ್ಟಿ  

ಏಪ್ರಿಲ್ 24: ಕನ್ನಡ, ಅರೇಬಿಕ್, ಏಪ್ರಿಲ್ 25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಏಪ್ರಿಲ್ 26: ಇತಿಹಾಸ, ಭೌತಶಾಸ್ತ್ರ, ಏಪ್ರಿಲ್ 28: ಭೂಗೋಳಶಾಸ್ತ್ರ ಮನಃ ಶಾಸ್ತ್ರ, ರಾಸಾಯನಶಾಸ್ತ್ರ ಮೂಲಗಣಿತ, ಏಪ್ರಿಲ್ 29: ಇಂಗ್ಲಿಷ್, ಮೇ 2: ತರ್ಕಶಾಸ್ತ್ರ ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ, ಮೇ 3: ಸಮಾಜಶಾಸ್ತ್ರ ಭೂಗರ್ಭ ಶಾಸ್ತ್ರ ವಿದ್ಯುನ್ಮಾನ ಶಾಸ್ತ್ರ ಗಣಕ ವಿಜ್ಞಾನ, ಮೇ 5: ಅರ್ಥಶಾಸ್ತ್ರ ಮೇ 6: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಮೇ 7: ಹಿಂದಿ, ಮೇ 8: ತಮಿಳು, ತೆಲುಗು, ಉರ್ದು, ಮಲಯಾಳಂ, ಮರಾಠಿ, ಸಂಸ್ಕೃತ, ಫ್ರೆಂಚ್, ಎನ್‌ಎಸ್‌ಕ್ಯೂಎಫ್‌.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top