ನ್ಯಾ ಶಿವರಾಜ್ ಪಾಟೀಲ್ ಅವರಿಗೆ ಅಭಿನಂದನೆ

Upayuktha
0


ಬೆಂಗಳೂರು:
 ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ರವರಿಗೆ ಇತ್ತೀಚಿಗೆ ಹಂಪಿ ವಿಶ್ವವಿದ್ಯಾಲಯದಿಂದ  ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸಲಾಯಿತು.

ಶಿವರಾಜ ಪಾಟೀಲ್ ಮೂಲತ ರಾಯಚೂರು ಜಿಲ್ಲೆಯರಾಗಿದ್ದು  ಪ್ರಸ್ತುತ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ, ಹಿರಿಯ ಸಂಶೋಧಕ ಮತ್ತು ಸಾಹಿತಿ ಡಾ ಕೆ ಜಿ ಲಕ್ಷ್ಮೀನಾರಾಯಣಪ್ಪ, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಪತ್ರಕರ್ತ ವೇಣುಗೋಪಾಲ್, ಧಾರ್ಮಿಕ ದತ್ತಿ ಇಲಾಖೆಯ ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 ಜಸ್ಟಿಸ್ ಶಿವರಾಜ್ ಪಾಟೀಲ್ ಫೌಂಡೇಶನ್ ಪ್ರಕಟಿಸಿರುವ ಸಂಜೆಗೊಂದು ನುಡಿ ಚಿಂತನ 365  ಕಿರು ಹೊತ್ತಿಗೆಯನ್ನು ಎಲ್ಲರಿಗೂ ನೀಡಿ ನ್ಯಾಯಾಧೀಶರು ಗೌರವಿಸಿದರು.

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top