ಅಧಿಕಾರಿಗಳ ಬದ್ಧತೆಯೇ ಸಂಸ್ಥೆಯ ಏಳ್ಗೆಗೆ ಬುನಾದಿ: ಡಾ. ಪೆರ್ಲ

Upayuktha
0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವ್ಯವಸ್ಥಾಪಕ ಜಯಂತ್ ಪೂಜಾರಿಗೆ ಬೀಳ್ಕೊಡುಗೆ




ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಯಶಸ್ವಿ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅದರಲ್ಲಿರುವ ನಿಷ್ಠಾವಂತ ಅಧಿಕಾರಿಗಳ ಕೊಡುಗೆ ಅಪಾರ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲಬುರಗಿಯ ವ್ಯವಸ್ಥಾಪಕರಾದ ಜಯಂತ ಪೂಜಾರಿ ಅವರು ಮೈಸೂರಿಗೆ ವರ್ಗಾವಣೆ ಹೊಂದಿರುವುದರಿಂದ ಮಾರ್ಚ್ 5ರಂದು ಶನಿವಾರ ಕಲಬುರಗಿಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣ ದಲ್ಲಿ ಏರ್ಪಡಿಸಿದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಜಯಂತ ಪೂಜಾರಿಯವರ ಕಾಯಕ ಶ್ರದ್ಧೆ, ತಾಳ್ಮೆ ಅಭಿವೃದ್ಧಿಯ ಮುನ್ನೋಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ವಿಗೆ ಕಾರಣವಾಗಿದೆ. ಇಂತಹ ಮಾದರಿ ವ್ಯಕ್ತಿತ್ವದ ಅಧಿಕಾರಿಗಳ ಸೇವಾ ಕಾರ್ಯ ಅನುಕರಣೀಯ ಎಂದರು.


ಕಲಬುರ್ಗಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸಿಎನ್. ಎನ್ ಬಾಬಳಗಾಂವ ಮಾತನಾಡಿ ಈ ಭಾಗದ ಅಭಿವೃದ್ಧಿಗೆ ತಮ್ಮ ವಿಶಿಷ್ಟ ಸೇವಾ ಕಾರ್ಯ ಮಾಡಿದ ಪೂಜಾರಿಯವರ ಸೇವಾ ಕಾರ್ಯ ಶ್ಲಾಘನೀಯ ಎಂದರು. ವೇದಿಕೆ ಉಪಾಧ್ಯಕ್ಷರಾದ ಅನಿಲ್ ಕುಮಾರ್ ಡೋಂಗಿ ಮಾತನಾಡಿ ಶ್ರೀ ಮಂಜುನಾಥ ಸ್ವಾಮಿಯ ಭಕ್ತನಾಗಿ ಜನಮುಖಿಯಾಗಿ ಅತ್ಯುತ್ತಮ ಅಧಿಕಾರಿಯಾಗಿ  ಹೆಸರು ಪಡೆದ ಜಯಂತ್ ಪೂಜಾರಿಯವರ ಮೂರು ವರ್ಷಗಳ ಸೇವೆ ಸ್ಮರಣೀಯ ಎಂದರು. ಯೋಜನೆಯ ಸೇವಾ ಪ್ರಮುಖರಾದ ಶ್ರೀಮತಿ ಮಮತಾ ಸುವರ್ಣ ಮಾತನಾಡಿ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ಕಟ್ಟಿ ಬೆಳೆಸಲು ಜಯಂತ್ ಪೂಜಾರಿ ಅವರ ಕರ್ತೃತ್ವ ಶಕ್ತಿ ಅನುಪಮವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಧನರಾಜ ಭಾ, ರವಿ ನೀಲೂರು, ಬಾಬು ರಾವ್, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಕಲ್ಲನಗೌಡ, ರಿಯಾಜ್ ಅಹಮದ್, ಕೃಷ್ಣಪ್ಪ ಮಂಜುನಾಥ ಶಿವರಾಜ್ ಆಚಾರ್ಯ ಗೋಪಾಲ್ ಯಾದವ್, ಪ್ರವೀಣ್ ಸುವರ್ಣ ಮತ್ತಿತರ ಅನೇಕರು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಲಬುರಗಿ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಿಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top