ಬಂಟ್ವಾಳದ ಸುಧೀರ್ ಸೇರಿದಂತೆ 17 ಮಂದಿ ಬೆಂಗಳೂರಿನಲ್ಲಿ ಪದಕ ಸ್ವೀಕಾರ
ಮಂಗಳೂರು: ಮಂಗಳೂರಿನ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಟಿ ಕ್ರೈಮ್ ಬ್ರಾಂಚ್ ತಂಡದ ಹದಿಮೂರು ಮಂದಿಯನ್ನು ದಕ್ಷತೆಯ ಕಾರ್ಯನಿರ್ವಹಣೆಗಾಗಿ 13 ಮಂದಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಈ ಬಾರಿಯ ಪದಕ ವಿಜೇತ ತಂಡದಲ್ಲಿ ಬಂಟ್ವಾಳದ ಸುಧೀರ್ ಕುಮಾರ್ ಸೇರಿದಂತೆ ಸಿಸಿಬಿ ವಿಭಾಗದ ಎಎಸ್‌ಐ ರಿತೇಶ್, ಶೀನಪ್ಪ , ಹೆಡ್ ಕಾನ್ಸ್ ಟೇಬಲ್ ಗಳಾದ ಆಂಜನಪ್ಪ, ಭೀಮಪ್ಪ ಉಪ್ಪಾರ, ಪುರುಷೋತ್ತಮ, ದಾವೋದರ ಕೆ, ಸಂತೋಷ್ ಕುಮಾರ್, ವಿಜಯ ಶೆಟ್ಟಿ, ಶ್ರೀಧರ ವಿ, ಪ್ರಕಾಶ್ ಸಪ್ತಗಿಹಳ್ಳಿ ಅಭಿಷೇಕ್ ಎ.ಆರ್ ಅವರನ್ನು ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ.
2022ರಲ್ಲಿ ಸಿಸಿಬಿ ಘಟಕದ ಎಸ್‌ಐ ಸುದೀಪ್, 2023ರಲ್ಲಿ ಶರಣಪ್ಪ ಭಂಡಾರಿ, ಹೆಡ್ ಕಾನ್ಸ್ ಟೇಬಲ್ ನಾಗರಾಜ್ ಮತ್ತು ಎಎಸ್‌ಐ ಮೋಹನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಮಂಗಳೂರು ಸಿಸಿಬಿ ಘಟಕದಿಂದ ಇಬ್ಬರು ಪಿಎಸ್‌ಐ ಸೇರಿ ಒಟ್ಟು 17 ಮುಖ್ಯಮಂತ್ರಿ ಪದಕ ಬೆಂಗಳೂರಿನಲ್ಲಿ ಎಪ್ರಿಲ್ 2ರಂದು ಸ್ವೀಕರಿಸಿದರು..
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕೂಡ ಇದ್ದು, ಒಟ್ಟು ತಂಡಕ್ಕೆ ನೇತೃತ್ವ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ