ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಮನೆ ಹಸ್ತಾಂತರ

Upayuktha
0

 


ಬೆಳ್ತಂಗಡಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು  ಮಾತೃಶ್ರೀ ಅಮ್ನನವರ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳು ಮಾಶಾಸನ ಪಡೆಯುತ್ತಿರುವ ಅರಸಿನಮಕ್ಕಿ ವಲಯದ   ವಾತ್ಸಲ್ಯ ಸದಸ್ಯ ರಾದ  ರೇವತಿಯವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಲಾಗಿದ್ದು, ಮನೆಯನ್ನು ಮಾತೃಶ್ರೀ ಹೇಮಾವತಿ ಅಮ್ಮ ನವರು ಮತ್ತು ಮಾತೃಶ್ರೀ ಶ್ರದ್ದಾ ಅಮಿತ್ ರವರು ಹಸ್ತಾಂತರಿಸಿದರು. 


ಈ ಸಂದರ್ಭದಲ್ಲಿ ವಾತ್ಸಲ್ಯ ಸದಸ್ಯರಾದ ರೇವತಿ ಯವರು ಗಂಡನನ್ನು ಕಳೆದು ಕೊಂಡು ಮನೆ ಬಿದ್ದು ಹೋಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನನಗೆ ಮಾಶಾಸನ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಾತ್ಸಲ್ಯ ನಿಧಿ ಸೌಲಭ್ಯ ನೀಡಿ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಟ್ಟು ನನ್ನ ನೋವಿಗೆ ಸಾಂತ್ವನ ದೇವತೆಯಾಗಿ ಪ್ರೀತಿ ವಾತ್ಸಲ್ಯ ವನ್ನುನೀಡಿದ ಅಮ್ಮನಿಗೆ ದೇವರು ಅರೋಗ್ಯ ಕೊಟ್ಟು ಕಾಪಾಡಲಿ ಎಂದರು.


ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟಿಯವರಾದ ಡಾ /ಹರೀಶ್ ಕೃಷ್ಣ ಸ್ವಾಮಿ, ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ, ತಾಲೂಕು ಜನಜಾಗೃತಿ ವೇದಿಕೆಯ ಸದ ಸ್ಯರಾದ ಚೆನ್ನಪ್ಪ ಗೌಡ, ಅವಿನಾಶ್ ಬಿಡೆ,   ಜ್ಞಾನ ವಿಕಾಸ ವಿಭಾಗದ ನಿರ್ದೇಶಕರಾದ ವಿಠಲ ಪೂಜಾರಿ, ಜ್ಞಾನ ವಿಕಾಸ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಅಮೃತ, ತಾಲೂಕು ಯೋಜನಾಧಿಕಾರಿ ಸುರೇಂದ್ರ ಒಕ್ಕೂಟದ ಅದ್ಯಕ್ಷರು ಪದಾಧಿಕಾರಿಗಳು ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter      

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top