ಬಳ್ಳಾರಿ: ನಗರದ ರೇಡಿಯೋ ಪಾರ್ಕ್ನಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ನಿಮ್ಮಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮದೆಂದು ಕಾಲೇಜಿನ ಪ್ರಿನ್ಸಿಪಲ್ ಡಾ ಪ್ರಜ್ಞಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಖಾಸಗೀ ಕಾಲೇಜಿನ ಹಾವಳಿ ಇಲ್ಲದಿದ್ದಾಗ ಸರ್ಕಾರಿ ಕಾಲೇಜುಗಳಲ್ಲಿಯೂ ಕಡಿಮೆ ಅಂಕ ಪಡೆದವರು ಪ್ರವೇಶ ಪಡೆಯಲು ಕಷ್ಟವಿತ್ತು ಅದಕ್ಕೂ ಶಿಫಾರಸು ಬೇಕಿತ್ತು. ಆದರೆ ಈಗ ನಗರದಲ್ಲಿ ಸರಳಾದೇವಿ ಕಾಲೇಜು ಬಿಟ್ಟರೆ ಉಳಿದ ಕಾಲೇಜುಗಳ ಪರಿಸ್ಥಿತಿ ಬದಲಾಗಿದೆ. ಕಳೆದ 11 ವರ್ಷಗಳ ಹಿಂದೆ ಆರಂಭವಾದ ಈ ಕಾಲೇಜಿನಲ್ಲಿ ಈ ವರೆಗೆ ಬಿಎ.ಬಿಕಾಂ ತರಗತಿಗಳಿದ್ದವು. ಈ ವರ್ಷ ಬಿಎಸ್ಸಿ ಸಹ ಆರಂಭಿಸುತ್ತಿದ್ದಾರೆ.
ಕಳೆದ ವರ್ಷ ಕಾಲೇಜಿನಲ್ಲಿ 351 ವಿದ್ಯಾರ್ಥಿನಿಯರು ಇದ್ದಾರೆ. ಐದು ಜನ ಖಾಯಂ 16 ಜನ ಅತಿಥಿ ಉಪನ್ಯಾಸಕರು ಆರಂಭದಲ್ಲಿ 38 ವಿದ್ಯಾರ್ಥಿಗಳಿದ್ದ ಈ ಕಾಲೇಜು ಉತ್ತಮ ಭೋದನೆಯಿಂದ ಈಗ 350 ರ ಗಡಿ ದಾಟಿದೆ. ಶೇ 90 ರಷ್ಟು ವಿದ್ಯಾರ್ಥಿಗಳು ಶೇ 80 ಕ್ಕಿಂತ ಹೆಚ್ಚು ಅಂಕ ಪಡೆದು ಡಿಸ್ಟ್ರಿಂಕ್ಸನ್ ಪಡೆದಿದ್ದಾರೆ.ಉದ್ಯೋಗ ಮೇಳ ಮಾಡಿದಾಗ 38 ಜನರಿಗೆ ಉದ್ಯೊಗವೂ ದೊರೆತಿತ್ತು. ಈಗ ಪ್ರವೇಶಾತಿ ಆರಂಭಗೊಂಡಿದ್ದು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಇತರೇ ಎಲ್ಲಾ ಕಾಲೇಜುಗಳಂತೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯ, ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್‌ಗಳಿವೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿನಿಯರು ಬರುತ್ತಿಲ್ಲ. ಅದಕ್ಕಾಗಿ ಇಲ್ಲಿನ ಉಪನ್ಯಾಸಕರೇ ನಗರದ ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ಅಡ್ಮಿಷನ್ ಬಗ್ಗೆ ಮಾಹಿತಿ ನೀಡುತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕಾಲೇಜಿನ ಮುಖ್ಯ ಕೊರತೆ ಎಂದರೆ ಹಳೆ ಕಟ್ಟಡ, ಹಾಗಂತ ತರಗತಿ ಕೊಠಡಿಗಳ ಕೊರತೆ ಇಲ್ಲ. ಪ್ರವೇಶಾತಿಗೆ ಬರುವ ವಿದ್ಯಾರ್ಥಿಗಳು ನೋಡಿದ ತಕ್ಷಣ ಈ ಹಳೇ ಕಟ್ಟಡ ನೋಡಿ ಹಿಂಜರಿಯುತ್ತಾರೆ. ಆದರೆ ಉತ್ತಮ ಭೋದನೆ ಇಲ್ಲಿದೆಂಬುದು ಅವರು ಅರಿಯಬೇಕಿದೆಂದರು. ಹೊಸ ಕಟ್ಟಡ ಕಟ್ಟಲು 2.88 ಎಕರೆ ನಲ್ಲ ಚೆರುವಿನ ವಾಲ್ಮೀಕಿ ಭವನದ ಬಳಿ ನಿವೇಶನ ದೊರೆತಿದೆ. ಇಲ್ಲಿ ಗ್ರಾಮಿಣ ಶಾಸಕ ಬಿ. ಬಿ. ನಾಗೇಂದ್ರ ಅವರು ಸಚಿವರಿದ್ದಾಗ ಕಳೆದ ವರ್ಷ ಮಾರ್ಚ್ 12 ರಂದು ವಿಶೇಷ ಅನುದಾನದಡಿ 25 ಕೋಟಿ ಅನುದಾನದ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿದ್ದರು. ಆದರೆ ಈ ವರೆಗೆ ಡಿಪಿಆರ್ ಸಹ ರೆಡಿಯಾಗಿಲ್ಲ ಅಂದರೆ ಕಟ್ಟಡ ಕಾಮಗಾರಿಯೂ ಆರಂಭಗೊಂಡಿಲ್ಲ. ನಾಗೇಂದ್ರ ಅವರು ಆಸಕ್ತಿಯಿಂದ ಈ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಿ ಕೊಡಲು ಮುಂದಾಗಬೇಕಿದೆ ಎಂದರು.
ಸಧ್ಯ ಬಿಎ, ಬಿಕಾಂ ಕೋರ್ಸ್ ಇದೆ. ಈ ವರ್ಷ ಬಿಎಸ್ಸಿ ಆರಂಭ ಮಾಡುತ್ತಿದೆ. ಮುಂದಿನ ವರ್ಷ ಬಿಬಿಎ ಆರಂಭ ಮಾಡಲಿದೆ. ನಮ್ಮಲ್ಲಿ ಉತ್ತಮ ಭೋದಕರು ಇದ್ದಾರೆ. ಕಾಲೇಜು ಕಟ್ಟಡ ನೋಡದೆ ಗುಣ ಮಟ್ಟದ ಶಿಕ್ಷಣಕ್ಕಾಗಿ ಈ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಿದೆ ಎಂದು ಡಾ.ಪ್ರಜ್ಞಾ ಕೆ.ವಿ. ಪ್ರಾಂಶುಪಾಲರು, ಸರಗಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ. ತಿಳಿಸಿದ್ದಾರೆ.