ಬಳ್ಳಾರಿ: ಜನಸಂಖ್ಯಾ ದೃಷ್ಟಿಯಿಂದ ಅಲ್ಪ ಸಂಖ್ಯಾತರಾದ ಬ್ರಾಹ್ಮಣ ಸಮಾಜದ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ಹೆಚ್ಚುತ್ತಿದ್ದು ಇದು ನಿಲ್ಲಬೇಕು. ಇಲ್ಲದಿದ್ದರೆ ನಾವೂ ಪರುಶುರಾಮರು ಆಗಬೇಕಾಗುತ್ತದೆಂದು ಬಳ್ಳಾರಿಯ ಬ್ರಾಹ್ಮಣರ ಒಕ್ಕೂಟ ಹೇಳಿದೆ.
ನಗರದ ಸಂಗನಕಲ್ಲು ರಸ್ತೆಯ ಶಂಕರ ಮಠದಲ್ಲಿ ಸುದ್ದಿಗೋಷ್ಟಿ ನಡೆಸಿದ ಒಕ್ಕೂಟದ ಗೌರವ ಅಧ್ಯಕ್ಷ ಡಾ.ಬಿ.ಕೆ.ಸುಂದರ್, ಅಧ್ಯಕ್ಷ ಪ್ರಕಾಶ್ ರಾವ್, ಕಾರ್ಯದರ್ಶಿ ಬಿ.ಕೆ.ಬಿಎನ್ ಮೂರ್ತಿ, ಜಿಲ್ಲಾ ಪ್ರತಿನಿಧಿ ಡಾ.ಶ್ರೀನಾಥ್ ಡೊಕ್ಕಿ ಅವರು ಇತ್ತೀಚೆಗೆ ನಡೆದ ಇಂಜಿನೀಯರಿಂಗ್ ಪ್ರವೇಶದ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷೆ ಬರೆಸಿದ್ದಾರೆ.
ತೆಗೆಯದವರಿಗೆ ಪರೀಕ್ಷೆಗೆ ಅವಕಾಶ ನೀಡಿಲ್ಲ. ಇದನ್ನು ಖಂಡಿಸುತ್ತದೆ. ಪರಿಕ್ಷೆ ಬರೆಯದವರಿಗೆ ಮರು ಪರೀಕ್ಷೆಗೆ ಪರೀಕ್ಷಾ ಮಂಡಳಿ ಅವಕಾಶ ನೀಡಬೇಕು. ಜನಿವಾರ ತೆಗೆಸಿದವರಿಗೆ ಅಮಾನತು ಮಾಡಿದರೆ ಸಾಲದು ಅವರಿಗೆ ಕಠಿಣ ಶಿಕ್ಷೆ ಆಗಬೇಕು ಇಲ್ಲದಿದ್ದರೆ ನಾವೂ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಜಾತಿ ಗಣತಿ ಅವೈಜ್ಞಾನಿಕವಾಗಿದೆ. ನಮ್ಮ ಸಮುದಾಯದ ಸಂಖ್ಯೆ 15 ಲಕ್ಷ ಎಂದು ಜಾತಿ ಗಣತಿಯಲ್ಲಿ ಹೇಳಿದೆ. ವಾಸ್ತವದಲ್ಲಿ ಹೆಚ್ಚಿದೆ. ಗಣತಿಗೆ ನಮ್ಮ ಮನೆಗೆ ಬಂದಿಲ್ಲ. ಇದು ಅವೈಜ್ಞಾನಿಕ ವರದಿ. ಇದನ್ನು ವಿರೋದಿಸುತ್ತದೆ ಜಾರಿಗೆ ತರಬಾರದು ಎಂದರು.
ಚಿತ್ರ ನಿರ್ದೇಶಕ ಅನುರಾಗ ಕಶಪ್ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕೀಳು ಅಭಿರುಚಿಯಿಂದ ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆಂದು ಹೇಳಿದ್ದನ್ನು ನಮ್ಮ ಒಕ್ಕೂಟ ಖಂಡಿಸುತ್ತದೆ. ಆತನ ಮೇಲು ಕ್ರಮ ಜರುಗಬೇಕು ಎಂದರು.
ನಮ್ಮ ಸಮುದಾಯದಲ್ಲಿರುವ ಅಡುಗೆ ಮಾಡುವವರು, ಪುರೋಹಿತರು ಸೇರಿದಂತೆ ಅನೇಕ ವೃತ್ತಿಗಳಲ್ಲಿ ಇರುವವರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಇಡಬ್ಲು ಎಸ್ ಜಾರಿಗೆ ತಂದರೂ ಉಪ ಯೋಗವಾಗುತ್ತಿಲ್ಲ. ಉದ್ದೇಶಪೂರ್ವಕವಾಗಿ ನಮ್ಮು ಸಮುದಾಯಕ್ಕೆ ಇಡಬ್ಲುಎಸ್ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ 25 ಸಾವಿರ ಜನತೆಗೆ ಕೇವಲ 30 ಜನರಿಗೆ ಮಾತ್ರ ಈ ಪ್ರಮಾಣ ಪತ್ರ ದೊರೆತಿದೆ. ಅದೂ ಶಿಕ್ಷಣಕ್ಕೆ ಮಾತ್ರ. ಈಮೀಸಲಾತಿಯಲ್ಲಿ ಒಂದೇ ಒಂದು ಉದ್ಯೋಗ ದೊರೆತಿಲ್ಲ ಎಂದ ಅವರು. ನೀಡುವ ಪ್ರಮಾಣ ಪತ್ರದ ಅವಧಿ ಕೇವಲ ಒಂದು ವರ್ಷಕ್ಕೆ ಮಾತ್ರ. ಬೇರೆಯವರಿಗೆ ಐದು ವರ್ಷಕ್ಕೆ ನೀಡಲಾಗುತ್ತದೆ. ನಮ್ಮ ಆರ್ಥಿಕ ಸ್ಥಿತಿ ಒಂದು ವರ್ಷದಲ್ಲಿ ಬದಲಾಗುತ್ತಾ ವಿನಾಕಾರಣ ನಮಗೆ ಈ ವಿಷಯದಲ್ಲಿ ಸಮಸ್ಯೆ ಮಾಡಲಾಗುತ್ತದೆ. ಪ್ರಮಾಣ ಪತ್ರ ಲಂಚದ ಹಣ ವಿಲ್ಲದೆ ಆಗುವುದಿಲ್ಲ ಎಂದು ಆರೋಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ