ಬಳ್ಳಾರಿಯಲ್ಲಿ ಮಕ್ಕಳಿಗಾಗಿ ಚೆಸ್‌ ಪಂದ್ಯ

Upayuktha
0




ಬಳ್ಳಾರಿ: ನಗರದ ಪೋಲ ಹೋಟೆಲಿನಲ್ಲಿ ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಏಳು ವರ್ಷದ ಒಳಗಿನ ಮತ್ತು 9 ವರ್ಷದ ಒಳಗಿನ ಬಾಲಕ ಬಾಲಕಿಯರಿಗಾಗಿ ಚೆಸ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. 


ಪಂದ್ಯಾವಳಿಯ ಉದ್ಘಾಟನೆಯನ್ನು ಪೋಲಾ ಪ್ರವೀಣ್ ಹಾಗೂ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಯ್ಯ,  ಅಂತರಾಷ್ಟ್ರೀಯ ಆರ್ಬಿಟರ್ ಆಗಿದ್ದಂತ ಬಸವರಾಜ್ ಸಾಮಾಜಿಕ ಹೋರಾಟಗಾರ, ಅಮ್ಮ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಮಂಜುನಾಥ ಜಮಾಪುರ್, ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಬೆಳಗಲ್ ಹನುಮಂತು ಇವರು ನಡೆಸಿಕೊಟ್ಟರು.


ನೂತನ ಜಿಲ್ಲಾ ಗೌರವಾಧ್ಯಕ್ಷರಾಗಿ ಪೋಲ ಪ್ರವೀಣ್ ಅವರನ್ನು ಆಯ್ಕೆ ಮಾಡಲಾಯಿತು. ಚೆಸ್ ಮೈಂಡ್ ಗೇಮ್ , ಮಕ್ಕಳ ಅಭಿವೃದ್ಧಿಗೆ ಮಕ್ಕಳ ಬುದ್ಧಿವಂತಿಕೆಗೆ ಹೆಸರುವಾಸಿಯಾದಂತ ಗೇಮ್, ಇದನ್ನು ಬಳ್ಳಾರಿ ಜಿಲ್ಲೆಯಲ್ಲಿ ಉನ್ನತ ಮಟ್ಟಕ್ಕೆ ಬೆಳಸಲು ನನ್ನ ಸಹಕಾರವಿರುತ್ತದೆ ಎಂದು ಅವರು ಹೇಳಿದರು.


ಬಳ್ಳಾರಿಯಲ್ಲಿ ರಾಜ್ಯದಿಂದ ಮಾನ್ಯತೆ ಪಡೆದ ಚೆಸ್ ಅಸೋಸಿಯೇಷನ್ ನಮ್ಮದಾಗಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸಬೇಕು ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top