ಬಳ್ಳಾರಿ: ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿರುವ ಬಿ.ಪಿ.ಎಸ್.ಸಿ ಪದವಿ ಪೂರ್ವ ಕಾಲೇಜು, ಬಳ್ಳಾರಿ, 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆಯೊಂದನ್ನು ದಾಖಲಿಸಿದ್ದು, ವಿದ್ಯಾರ್ಥಿಗಳ ಶ್ರಮ, ಅಧ್ಯಾಪಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ದೃಢ ದೃಷ್ಟಿಕೋನದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯು. ವಿನೋದ್ ಕುಮಾರ 98.50% (591/600) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದರೆ, ವಿಜ್ಞಾನ ವಿಭಾಗದ ಕೋಟ್ರಾ ಮಧುರಿಮ 96% (576/600) ಅಂಕಗಳನ್ನು ಪಡೆದು ಪ್ರಭಾವಶಾಲಿ ಸಾಧನೆ ಮಾಡಿದ್ದಾರೆ. ಒಟ್ಟು ಶೇಕಡಾ 90% ಫಲಿತಾಂಶ - ಈ ಸಂಖ್ಯೆಗಳು ಕೇವಲ ಅಂಕಗಳಲ್ಲ, ಭವಿಷ್ಯದ ಮೇಲೆ ಕಟ್ಟುವ ಆತ್ಮವಿಶ್ವಾಸದ ಸಂಕೇತ. 67 ಮಂದಿ ಡಿಸ್ಟಿಂಕ್ಷನ್, 33 ವಿದ್ಯಾರ್ಥಿಗಳಿಂದ 100 ಅಂಕಗಳು - ಇದು ನಮ್ಮ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಪ್ರಾಮಾಣಿಕ ಪ್ರಯತ್ನದ ಪ್ರತಿಫಲ. ಕಾಲೇಜಿನ ಅಧ್ಯಕ್ಷರು ಡಾ. ಯಶವಂತ ಭೂಪಾಲ್ ತಮ್ಮ ಸಂತೋಷ ವ್ಯಕ್ತಪಡಿಸುತ್ತಾ ಹೇಳಿದರು:
"ಮೌಲ್ಯಮಯ ಶಿಕ್ಷಣವೇ ಪ್ರಬಲ ರಾಷ್ಟ್ರ ನಿರ್ಮಾಣಕ್ಕೆ ಮೂಲಸ್ಥಂಭ. ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಬದ್ಧತೆ. ಈ ಸಾಧನೆಯು ನಮ್ಮ ನಂಬಿಕೆಗೆ ಸಾಕ್ಷಿಯಾಗಿದ್ದು, ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ನಿಲ್ಲುತ್ತದೆ."
"ಸಾಧನೆಯ ಹಾದಿ ಸುಲಭವಲ್ಲ. ಆದರೆ ನಂಬಿಕೆ, ಶ್ರಮ ಹಾಗೂ ಮಾರ್ಗದರ್ಶನದೊಂದಿಗೆ ಯಾವ ಉದ್ದೇಶವೂ ಸಾಧ್ಯವಾಗಬಹುದು." ಇಂತಹ ಯಶಸ್ಸುಗಳು ಮುಂದಿನ ಪೀಳಿಗೆಗೆ ಪ್ರೇರಣೆಯ ಬೆಳಕು ಹರಡುವಂತೆ ಮಾಡಲಿ ಎಂಬ ಹಾರೈಕೆಯೊಂದಿಗೆ.. ಪ್ರಾಂಶುಪಾಲರಾದ ಹೆಚ್. ತ್ರಿಪುರಾಂಬರವರು, ಆಡಳಿತ ಮಂಡಳಿಯವರು ಹಾಗೂ ಎಲ್ಲಾ ಸಿಬ್ಬಂದಿಯವರು ವಿದ್ಯಾರ್ಥಿಗಳ ಸಾಧನೆಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ,ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ ಪ್ರಾಂಶುಪಾಲರು ಹೆಚ್. ತ್ರಿಪುರಾಂಬ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ