ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ರಕಾಶನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 15 ರಿಂದ 18ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಏಪ್ರಿಲ್ 15, ಮಂಗಳವಾರ : ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘದ ಸದಸ್ಯರಿಂದ ಭಜನೆ ಮತ್ತು ಶ್ರೀ ರಾಮವಿಠಲಾಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ "ತೀರ್ಥ ಪ್ರಬಂಧ" ವಿಷಯವಾಗಿ ಧಾರ್ಮಿಕ ಪ್ರವಚನ. (ಸಮಯ : ಸಂಜೆ 6 ರಿಂದ 8)
ಏಪ್ರಿಲ್ 16, ಬುಧವಾರ : ಗಾಂಧಿಬಜಾರಿನ ಶ್ರೀ ವ್ಯಾಸತೀರ್ಥ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಮತ್ತು ಶ್ರೀ ರಾಮವಿಠಲಾಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ "ತೀರ್ಥ ಪ್ರಬಂಧ" ಧಾರ್ಮಿಕ ಪ್ರವಚನ. (ಸಮಯ ; ಸಂಜೆ 6 ರಿಂದ 8).
ಏಪ್ರಿಲ್ 17, ಗುರುವಾರ : "ಹರಿನಾಮ ಸಂಕೀರ್ತನೆ". ಗಾಯನ : ಕು|| ಅಹಿಕಾ ನಾಗದೀಪ್, ಪಿಟೀಲು : ಸೀತಾರಾಮ್, ಮೃದಂಗ : ಪ್ರಣವ್. (ಸಮಯ : ಸಂಜೆ 7 ರಿಂದ 8-30).
ಏಪ್ರಿಲ್ 18, ಶುಕ್ರವಾರ : ವಿಜಯನಗರದ ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಮತ್ತು ಶ್ರೀ ರಾಮವಿಠಲಾಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ "ತೀರ್ಥ ಪ್ರಬಂಧ" ವಿಷಯವಾಗಿ ಧಾರ್ಮಿಕ ಪ್ರವಚನ. (ಸಮಯ : ಸಂಜೆ 6 ರಿಂದ 8).
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ