ಉಡುಪಿ: ಪರಮ ಪೂಜ್ಯ ಪುತ್ತಿಗೆ ಶ್ರೀಪಾದರು ಸನಾತನ ಧರ್ಮ ಸಂಸ್ಕೃತಿ ರಕ್ಷಣೆಗಾಗಿ ವಿಶ್ವಾದ್ಯಂತ ಸ್ಥಾಪಿಸಿರುವ ಕೃಷ್ಣ ಮಂದಿರಗಳಲ್ಲೊಂದಾದ ಅಮೆರಿಕಾದ ಫೀನಿಕ್ಸ್ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದ ವೆಂಕಟಕೃಷ್ಣ ದೇವಾಲಯಕ್ಕೆ ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾದ ಪ್ರಖರ ವಾಗ್ಮಿ ಅಣ್ಣಾಮಲೈಯವರು ಇಂದು ಭೇಟಿ ನೀಡಿದರು.
ಅಮೆರಿಕಾದ್ಯಂತ ಹಲವು ವಿಶ್ವವಿದ್ಯಾಲಯಗಳಲ್ಲಿ ನಿಗದಿತ ಉಪನ್ಯಾಸ ನೀಡಲು ಆಗಮಿಸಿದ್ದ ಅಣ್ಣಾಮಲೈಯವರು ಫಿನಿಕ್ಸಿನಲ್ಲಿ ಕಾರ್ಯಕ್ರಮವೊಂದರ ಸಂಯೋಜಕರಲ್ಲಿ ಇಲ್ಲಿಯ ಪ್ರಸಿದ್ಧ ದೇವಾಲಯವನ್ನು ನೋಡಲು ಅಪೇಕ್ಷೆ ಪಟ್ಟಾಗ ಸಂಯೋಜಕರು ಶ್ರೀ ಮಠದ ಈ ದೇವಾಲಯಕ್ಕೆ ಕರೆದುಕೊಂಡು ಬಂದರು.
ಈ ದೇವಾಲಯದ ವೈಭವವನ್ನು, ಉಡುಪಿಯ ಪೂಜಾಶೈಲಿಯನ್ನು ನೋಡಿದೊಡನೆ ಬಹಳ ಸಂಭ್ರಮಪಟ್ಟ ಅವರು ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಶ್ರೀಕೃಷ್ಣ ಮಠದಲ್ಲಿ ಪೂಜ್ಯ ಶ್ರೀಪಾದರನ್ನು ಭೇಟಿಯಾದದ್ದನ್ನು ಸ್ಮರಿಸಿಕೊಂಡರು.
ಭಾರತ ದೇಶದ ಮತ್ತು ನೆಚ್ಚಿನ ಪ್ರಧಾನಿ ಹೆಸರಿನಲ್ಲಿ ಅರ್ಚನೆ ಸಲ್ಲಿಸಿದ ಅಣ್ಣಾಮಲೈ ನಂತರ ಪ್ರಸಾದವನ್ನೂ ಸ್ವೀಕರಿಸಿದರು.
ನೆರೆದ ನೂರಾರು ಭಾರತೀಯರು ಭಾರತ್ ಮಾತಾ ಕೀ ಜೈ ಎಂದು ಉದ್ಘೋಷಿಸುತ್ತಿದ್ದಂತೆ. ಎಲ್ಲರ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.
ದೇವಾಲಯದ ಪ್ರಧಾನ ಅರ್ಚಕ ಕಿರಣ ರಾವ್ ಸ್ವಾಗತಿಸಿ ಪೂಜೆ ಮಾಡಿ ಪ್ರಸಾದವನ್ನಿತ್ತರು.
ಶ್ರೀ ಮಠದ ಸಹ ಅರ್ಚಕರಾದ ಮಂಜುನಾಥ ಭಟ್, ರಾಘವೇಂದ್ರ ಭಟ್, ಗುಂಡು ರಾವ್ ಮತ್ತು ಕಾರ್ಯಕರ್ತರಾದ ಶ್ರೀಧರ್, ರವಿ ರಾವ್, ರಂಗನಾಥ್ ಮತ್ತಿತರರು ಸಹಕರಿಸಿದರು.
ಅಣ್ಣಾಮಲೈ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮೆಚ್ಚುಗೆಯನ್ನು ಸೂಚಿಸಿರುತ್ತಾರೆ ಎಂದು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ