ನವೋದ್ಯಮ ಧನಸಹಾಯಕ್ಕಾಗಿ ಪದವೀಧರರಿಂದ ಅರ್ಜಿ ಆಹ್ವಾನ

Upayuktha
0

ಬೆಂಗಳೂರು: ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಪದವೀಧರರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಅರ್ಹ ಅಭ್ಯರ್ಥಿಗಳಿಂದ ನವೋದ್ಯಮ ಧನಸಹಾಯಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ 3 ವರ್ಷ ಅಥವಾ 4 ವರ್ಷಗಳ ಪದವಿ ಶಿಕ್ಷಣವನ್ನು ವಿಜ್ಞಾನ ಅಥವಾ ಇಂಜಿನಿಯರಿಂಗ್‌ ವಿಭಾಗದಲ್ಲಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯು ಅವಕಾಶ ನೀಡಿದೆ.


ಆಯ್ಕೆಯಾದವರಿಗೆ ಆರಂಭಿಕ ಹಂತದ ಧನಸಹಾಯ/ ಇನ್ನೋವೇಟರ್ಸ್‌ ಸ್ಟೈಫಂಡ್‌ ನೀಡಲಾಗುತ್ತದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಿವರಗಳಿಗಾಗಿ eitbt.karnataka.gov.in ಗೆ ಭೇಟಿ ನೀಡಬಹುದು. 


ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮ (ಆರ್‌ಜಿಇಪಿ) ಆಯ್ಕೆ ಮಾಡಿ , ಕ್ಲಿಕ್ ಮಾಡಿ ನೋಟಿಫಿಕೇಶನ್‌ ಓದಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಕೊನೆ ಅವಕಾಶ 26-04-2025 ರ ಸಂಜೆ 05 ಗಂಟೆವರೆಗೆ ಇರುತ್ತದೆ. 


ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್‌), ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಬಿಕೆಜಿ ಸಫೈರ್, #59, ರೈಲ್ವೆ ಪ್ಯಾರಲೆಲ್ ರೋಡ್, ಕುಮಾರ ಪಾರ್ಕ್‌ ವೆಸ್ಟ್‌, ಶೇಷಾದ್ರಿಪುರಂ, ಬೆಂಗಳೂರು - 560020. ದೂರವಾಣಿ : 08022231006/ 91 - 7204304904. ಇಮೇಲ್ : rgep.startupkar@gmail.com



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top