ಮನವಿಗೆ ಕ್ಷಿಪ್ರ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಸಂಸದ ಕ್ಯಾ. ಚೌಟ

Upayuktha
0

ಮಂಗಳಸೂತ್ರ ಪ್ರಕರಣ : ರೈಲ್ವೇ ಇಲಾಖೆಯ ಮುಂದಿನ ಎಲ್ಲಾ ಪರೀಕ್ಷಾ ನಿಯಮದಲ್ಲೂ ಪರಿಷ್ಕರಣೆ



ಮಂಗಳೂರು:  ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆ ಪರೀಕ್ಷೆಗೆ ಹಾಜರಾಗುವ ವೇಳೆ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಜನಿವಾರದಂತಹ ಧಾರ್ಮಿಕ ಗುರುತುಗಳನ್ನು ಧರಿಸಬಾರದು ಎನ್ನುವ ಸೂಚನೆಯನ್ನು ಕೈ ಬಿಡಬೇಕೆಂಬ ಕೋರಿಕೆಗೆ ಕ್ಷಿಪ್ರವಾಗಿ ಸ್ಪಂದಿಸಿ ರೈಲ್ವೇ  ಇಲಾಖೆಯ ಎಲ್ಲಾ ಪರೀಕ್ಷೆಗಳ ನಿಯಮದಲ್ಲೂ ಪರಿಷ್ಕರಣೆ ತಂದಿರುವ ಕೇಂದ್ರ ಸರ್ಕಾರದ ಕ್ರಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ವಾಗತಿಸಿದ್ದಾರೆ.


ಕೇಂದ್ರ ಸರ್ಕಾರದ ಸ್ವಾಗತಾರ್ಹ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ.ಚೌಟ, ರೈಲ್ವೇ ಇಲಾಖೆಯ ನರ್ಸಿಂಗ್ ಪರೀಕ್ಷೆ ಪ್ರವೇಶ ಪತ್ರದಲ್ಲಿ ಅನೇಕ ವರ್ಷಗಳಿಂದ ಇರುವ ನಿಬಂಧನೆಗಳಂತೆ ಧಾರ್ಮಿಕ ಗುರುತುಗಳನ್ನು ತೆಗೆದು ಹಾಜರಾಗುವಂತೆ ಈ ಬಾರಿಯೂ ಸೂಚಿಸಿರುವುದು ಹಲವು ಗೊಂದಲಕ್ಕೆ ಕಾರಣವಾಗಿತ್ತು.  


ಅಭ್ಯರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಈ ವಿಚಾರವನ್ನು ನನ್ನ ಗಮನಕ್ಕೂ ತಂದಿದ್ದು ಕೂಡಲೇ ಈ ಬಗ್ಗೆ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ  ವಿ. ಸೋಮಣ್ಣ ಅವರಲ್ಲಿ ಮಾತುಕತೆ ನಡೆಸಿ ಪರೀಕ್ಷಾರ್ಥಿಗಳ ಹಿಂದೂ ಧಾರ್ಮಿಕ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸಂಸದ ನೆಲೆಯಲ್ಲಿ ಮನವಿ ಮಾಡಿದ್ದೆ. ಇದಕ್ಕೆ ತಕ್ಷಣ ಸಕಾರಾತ್ಮಕವಾಗಿ ತುರ್ತು ಸ್ಪಂದಿಸಿ,  ಪ್ಯಾರಾಗ್ರಾಫ್ 7 ಅನ್ನು  ಇಲಾಖೆಯ ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಅನ್ವಯವಾಗುವಂತೆ ಮಾರ್ಪಡಿಸಿ  ರೈಲ್ವೇ ಸಚಿವಾಲಯ ಆದೇಶ ಹೊರಡಿಸಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.


ನಮ್ಮ ಮನವಿಗೆ ಶೀಘ್ರ ಸ್ಪಂದಿಸಿ ಅಭ್ಯರ್ಥಿಗಳಲ್ಲಿ ಇದ್ದ ಗೊಂದಲ ನಿವಾರಣೆ ಮಾಡಿರುವ  ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ , ರಾಜ್ಯ ಸಚಿವರಾದ  ಸೋಮಣ್ಣ ಹಾಗೂ  ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಅಭ್ಯರ್ಥಿಗಳ ಹಾಗೂ ಹಲವು ಸಂಘಟನೆಗಳ ಪರ  ಹೃತ್ಪೂರ್ವಕ ಧನ್ಯವಾದ ಸಲ್ಲಿಸುವುದಾಗಿ ಕ್ಯಾ. ಚೌಟ ಇದೇ ವೇಳೆ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top