ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್ ನಿಂದ ಆಯೋಜನೆ
ಪುತ್ತೂರು: ಪುತ್ತೂರಿನ ಹೆಸರಾಂತ ಆಭರಣಗಳ ಮಳಿಗೆ ಮುಳಿಯ ಗೋಲ್ಡ್ & ಡೈಮಂಡ್ಸ್ ನ ನೂತನ್ ನವೀಕೃತ ವಿಸ್ತೃತ ಮಳಿಗೆಯ್ ಅನಾವರಣ ಪ್ರಯುಕ್ತ ಏ.24 ರಂದು ಸಂಜೆ 4 ಗಂಟೆಗೆ 'ಅಕ್ಷಯ ತೃತೀಯ ಚಿನ್ನ ಖರೀದಿ ಕುರಿತು ಧಾರ್ಮಿಕ ಹಿನ್ನೆಲೆ ಮಹತ್ವದ ಕುರಿತು ವಿವರಿಸುವ ವಿಚಾರ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಪುತ್ತೂರಿನ ಸುಲೋಚನಾ ಟವರ್ಸ್ ಮೂರನೇ ಮಹಡಿಯ ಅಪರಂಜಿ ರೂಫ್ ಗಾರ್ಡನ್ ನಲ್ಲಿ ನಡೆಸಲಾಗುತ್ತಿದೆ. ಶ್ರೀ ಕುಂಟಾರು ರವೀಶ ತಂತ್ರಿ, ಶ್ರೀ ಪಂಜ ಭಾಸ್ಕರ ಭಟ್ ಮತ್ತು ಶ್ರೀಮತಿ ವಂದನಾ ಶಂಕರ್ ಅವರು ವಿಚಾರ ಮಂಡನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಪಾಲ್ಗೊಳ್ಳಲಿದ್ದಾರೆ. ವಿವೇಕಾನಂದ ಸ್ವಾಯತ್ತ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿಜಯಾ ಸರಸ್ವತಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ