ನಗರದ ಗಡಿಯಾರ ಕಂಬದ ಬಳಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಾಲಿಗ್ರಾಮ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ 70ನೇ ವರ್ಷದ ಕನ್ನಡ ನಿತ್ಯೋತ್ಸವ ಪ್ರಯುಕ್ತ ನಡೆದ ಸರಸ್ವತಿ ಸಾಧಕ ಸಿರಿ ರಾಷ್ಟçಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ನಾವು ಸರ್ಕಾರಿ ಶಾಲೆಯಲ್ಲಿ ನೋಂದಣಿ ನೋಡಿದಾಗ ನೂರು ಮಕ್ಕಳು ದಾಖಲಾಗುವುದು ಹೆಚ್ಚು, ನಮ್ಮ ಮೈಸೂರು ಕಡೆಗೆ ಇದನ್ನು ನಾವು ನೋಡುತ್ತಿದ್ದೇವೆ. ಆದರೆ ಡಾ.ನಾಗೇಶ ಸಂಜೀವ ಕಿಣಿಯವರ ಸರ್ಕಾರಿ ಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎಂದರು. ಅವರ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ನೇತೃತ್ವದಲ್ಲಿ ಈ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸAಘ ಸಂಸ್ಥೆಗಳ ಸೇವಾ ಕಾರ್ಯಗಳನ್ನು ನಾವು ಭೂಕಂಪ, ಚಂಡಮಾರುತ, ಖಾಯಿಲೆಗಳು ಹರಡುವಂತಹ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ನೋಡಬೇಕು. ಸಂಸಾರ, ಆಸ್ತಿಪಾಸ್ತಿಗಳು ಹಾಳಾಗುತ್ತವೆ. ಅಂತಹ ಸಂದರ್ಭದಲ್ಲಿ ಅವರಿಗೆ ಅವಶ್ಯಕವಾಗಿರುವಂತಹ ವಸ್ತುಗಳನ್ನು ನೀಡಲು ಮುಂದಾಗುತ್ತಾರೆ. ಅವರು ನಮಗೆ ಸಾಕು ಬೇಡ ವಾಪಾಸು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಅಷ್ಟು ಸಂಘ ಸಂಸ್ಥೆಗಳು ಪರೋಪಕಾರಕ್ಕೆ ಮುಂದಾಗಿರುತ್ತವೆ. ನಮ್ಮ ಭಾರತ ಎಷ್ಟೇ ಪ್ರಾಕೃತಿಕ ವಿಕೋಪ ಆದರೂ ಕೂಡಾ ಅದು ಸರಿಮಾಡಿಕೊಳ್ಳುವಂತ ಶಕ್ತಿಯನ್ನು ಹೊಂದಿದೆ. ಕೋವಿಡ್ ಸಂದರ್ಭದಲ್ಲಿ ಲಸಿಕೆಯನ್ನು ಕೊಡುವಂತಹ ಕೆಲಸವನ್ನು ನಮ್ಮ ಭಾರತ ದೇಶ ಮಾಡಲು ಮುಂದಾಯಿತು. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಇರುವುದರಿಂದ ನಮ್ಮ ಭಾರತ ಮುಂದುವರೆಯಲು ಸಾಧ್ಯವಾಗಿದೆ ಎಂದರು.
ಮೈಸೂರಿನ ಸಾಮಾಜಿಕ ಸಾಧಕ ಡಾ.ಜಿ.ಗಂಗಾಧರಪ್ಪ ಮಾತನಾಡಿ, ಅಂದು ಇದ್ದ ಮಾನವೀಯ ಮೌಲ್ಯಗಳು ಇಂದಿನ ಪೀಳೀಗೆಯಲ್ಲಿ ಬರುವ ಮಾನವೀಯ ಮೌಲ್ಯಗಳು ಬಹುಪಾಲು ಕುಸಿಯುತ್ತಿವೆ. ಇಲ್ಲಿ ಬಂದಿರುವ ಸಾಧಕರು ಹೆಚ್ಚಾಗಿ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿ ಇಂದು ಸಾಧಕರಾಗಿ ಇಲ್ಲಿ ಗೌರವ ಸ್ವೀಕರಿಸುತ್ತಿದ್ದೀರಿ. ನಮ್ಮಿಂದ ಪ್ರತಿಫಲ ಪಡೆದವರು ಎಂದಿಗೂ ಮರೆಯುವುದಿಲ್ಲ. ಅವರೂ ಸಹ ಇಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ನಾಗೇಶ ಸಂಜೀವ ಕಿಣಿ, ಮುಂಡಗೋಡದ ಕನ್ನಡ ಉಪನ್ಯಾಸಕಿ ಡಾ.ನಾಗರತ್ನ ಎಸ್.ಶೆಟ್ಟಿ, ಶೈಕ್ಷಣಿಕ ಸಾಧಕಿ ಸಂಗೀತಾ ಪ್ರಸನ್ನ ನಾಡಿಗ್, ವಿದುಷಿ ಆಶಾ ಅಡಿಗ ಆಚಾರ್ಯ(ಅಮೇರಿಕ), ಗೌರವಾಧ್ಯಕ್ಷೆ ಜ್ಯೋತಿ ಗಣೇಶ ಶೆಣೈ, ಕಲಾಕುಂಚ ಅಧ್ಯಕ್ಷ ಕೆ.ಎಚ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್, ಪ್ರಧಾನ ಕಾರ್ಯದರ್ಶಿ ಶ್ರೀಪತಿ ರಾಘವೇಂದ್ರ ಶೆಣೈ, ಹಾಗೂ ಪದಾಧಿಕಾರಿಗಳು ಇದ್ದರು.
ಶ್ರೀಮತಿ ಚಂದ್ರಶೇಖರ ಅಡಿಗ ಪ್ರಾರ್ಥಿಸಿದರೆ, ಪುಷ್ಪ ಮಂಜುನಾಥ ಸ್ವಾಗತಿಸಿದರು. ಶೈಲಾ ವಿನೋದ ದೇವರಾಜ ಕಾರ್ಯಕ್ರಮ ನಿರೂಪಿಸಿದರೆ, ಡಿ.ಎಚ್.ಚನ್ನಬಸಪ್ಪ ವಂದಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಕ್ಷೇತ್ರಗಳ 190 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ