ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯಿತಿ

Upayuktha
0



ಉಡುಪಿ
: 2024-25 ರ ತೆರಿಗೆಯ ಮೇಲೆ ಶೇ. 3ರಷ್ಟು ತೆರಿಗೆಯನ್ನು ಉಡುಪಿ ನಗರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಹೆಚ್ಚಿಸಲಾಗಿದ್ದು, ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲೀಕರು ಹಾಗೂ ಅಧಿಭೋಗದಾರರು ಇದರನ್ವಯ ತೆರಿಗೆ ಪಾವತಿಸಬೇಕು.

ನಗರಸಭಾ ವ್ಯಾಪ್ತಿಯ ಕಟ್ಟಡದ/ಖಾಲಿ ನಿವೇಶನ ಮಾಲೀಕರು ಹಾಗೂ ಅಧಿಭೋಗದಾರರು 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು, 2024-25 ರ ಆಸ್ತಿ ತೆರಿಗೆಯ ಮೇಲೆ ಶೇ. 3 ರಷ್ಟು ಹೆಚ್ಚಿಸಿ, ಏಪ್ರಿಲ್  30 ರ ಒಳಗೆ ಪಾವತಿಸಿದರೆ ಶೇ.5 ರ ರಿಯಾಯಿತಿ ಪಡೆಯಬಹುದಾಗಿದೆ. 

ಮೇ 1ರಿಂದ ಜೂನ್ 30 ರ ವರೆಗೆ ದಂಡ ರಹಿತ ಪಾವತಿಗೆ ಅವಕಾಶವಿದ್ದು, ಜುಲೈ 1ರ ನಂತರ ಪಾವತಿಸಿದರೆ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ. 2ರಷ್ಟು ದಂಡ ವಿಧಿಸಲಾಗುವುದು. 2024-25 ನೇ ಸಾಲಿನ ಹಾಗೂ ಹಿಂದಿನ ಅವಧಿಯ ಆಸ್ತಿ ತೆರಿಗೆ ಪಾವತಿಸದೆ ಇರುವವರು ಶೇ. ೨ ರಷ್ಟು ದಂಡದ ಜೊತೆ ಪಾವತಿಸಿ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಕಚೇರಿ ಕೋರಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top