ಉನ್ನತ ಶಿಕ್ಷಣ ಅವಕಾಶಗಳಿಂದ ಮುನ್ನಡೆ: ಉದ್ಯಮಿ ಅನುಷಾ ಕಾಮತ್

Upayuktha
0





ಉಜಿರೆ: ಉನ್ನತ ಶಿಕ್ಷಣದ ಎಲ್ಲಾ ಸೌಲಭ್ಯ, ಅವಕಾಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಪೂರಕವಾಗಿಸಿಕೊಂಡು ಮುನ್ನಡೆ ಸಾಧಿಸಬೇಕು ಎಂದು ಉದ್ಯಮಿ ಅನುಷಾ ಕಾಮತ್ ಅಭಿಪ್ರಾಯಪಟ್ಟರು.


ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ಮತ್ತು ಸಂಶೋಧನಾ ವಿಭಾಗವು ‘ಪೈಥಾನ್ ಫಂಡಮೆಂಟಲ್ಸ್ : ಫ್ರಮ್ ಬೇಸಿಕ್ ಟು ಲಾಜಿಕ್ ಬಿಲ್ಡಿಂಗ್’ ಕುರಿತ ಎಂಬ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕಾರ್ಯಾಗಾರವನ್ನು ಉದ್ಘಾಟಿಸಿ ಎಸ್.ಡಿ.ಎಂ ಸೊಸೈಟಿಯ ಶೈಕ್ಷಣಿಕ ಸಲಹೆಗಾರರಾದ ಶಶಿಶೇಖರ್  ಎನ್ ಕಾಕತ್ಕರ್ ಮಾತನಾಡಿದರು.  ಸಂಶೋಧನೆಯಲ್ಲಿ ಮತ್ತು ನೈಜಜೀವನದ ಅನೇಕ ಕ್ಷೇತ್ರಗಳಲ್ಲಿ ಸಂಖ್ಯಾಶಾಸ್ತ್ರದ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಪಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾಕುಮಾರಿ, ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ ಸೌಮ್ಯ ಬಿ.ಪಿ, ಸಹಾಯಕ ಪ್ರಾಧ್ಯಾಪಕಿ ಮಂಜುಳಾ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top