ವಿನೂತನ ಆಲೋಚನಾ ಸಾಮರ್ಥ್ಯದಿಂದ ವಿಸ್ತೃತ ಅವಕಾಶಗಳು: ಡಾ.ಶರಣ್ ಕುಮಾರ್ ಶೆಟ್ಟಿ

Upayuktha
0



ಉಜಿರೆ: ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳ ನಡುವೆ ವಿನೂತನವಾಗಿ ಆಲೋಚಿಸುವ ಸಾಮರ್ಥ್ಯ ಹೊಸ ಬಗೆಯ ಔದ್ಯೋಗಿಕ ಅವಕಾಶಗಳನ್ನು ಪಡೆಯಲು ನೆರವಾಗುತ್ತದೆ ಎಂದು ಮಂಗಳೂರಿನ ಎ.ಜೆ.ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ.ಶರಣ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ವಿಭಾಗವು ‘ಸುಸ್ಥಿರ ಬೆಳವಣಿಗೆಗಾಗಿ ವಿವಿಧ ಕಾರ್ಯತಂತ್ರಗಳು’ ಕುರಿತ ‘ಎಕ್ಸ್ಪ್ಯಾಂಡಿಂಗ್ ಹಾರಿಜನ್’ ಶೀರ್ಷಿಕೆಯ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.


ದಿನದಿಂದ ದಿನಕ್ಕೆ  ಬೆಳೆಯುತ್ತಿರುವ ಜಗತ್ತಿನಲ್ಲಿ ವಿಶೇಷ ರೀತಿಯಲ್ಲಿ ಹೊಸ ಆಲೋಚನೆಗಳಿಂದ  ಮತ್ತು   ವಿಶೇಷ   ರೀತಿಯ   ಕೆಲಸಗಳಿಂದ ವಿದ್ಯಾರ್ಥಿಗಳು ತಮ್ಮನ್ನು ಗುರುತಿಸಿಕೊಳ್ಳಬೇಕು. ಈ ಬಗೆಯ ಕ್ರಿಯಾಶೀಲ ಗುರುತಿಸಿಕೊಳ್ಳುವಿಕೆಯಿಂದ ಔದ್ಯೋಗಿಕ ಅವಕಾಶಗಳ ಬಾಗಿಲು ತೆರೆಯುತ್ತದೆ. ತಂತ್ರಜ್ಞಾನದ ಅವಲಂಬನೆ ಹೆಚ್ಚಾದಾಗಲೂ ಆತಂಕ ಪಡುವ ಅನಿವಾರ್ಯತೆ ಎದುರಾಗುವುದಿಲ್ಲ ಎಂದರು.


ಉದೋಗ್ಯ ಅವಕಾಶಗಳನ್ನು  ಕಲ್ಪಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟಕರ ಸಂಗತಿಯಾಗಿದೆ. ಉಳಿದವರಿಗಿಂತ ಭಿನ್ನವಾಗಿ ಆಲೋಚಿಸುವ ಪ್ರಯತ್ನಗಳ ಕಡೆಗೆ ಹೆಚ್ಚಿನ ಗಮನವಿರಬೇಕು. ಎ.ಐ ತಂತ್ರಜ್ಞಾನಗಳಿಂದ  ಉದೋಗ್ಯ ಅವಕಾಶಗಳು ಕುಗ್ಗುತ್ತವೆ. ಪ್ರತಿದಿನವೂ ಹೊಸ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು.  ಒಂದೇ ಆದಾಯದ ಮೇಲಿನ ಆವಲಂಬನೆ ಕಡಿಮೆಯಾಗಬೇಕು. ಮಾರುಕಟ್ಟೆಯ ಏರಿಳಿತಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಮರ್ಥ್ಯವನ್ನು ಮರೂಪಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ   ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ.ಅವರು ಮಾತನಾಡಿದರು.   ವಿದ್ಯಾರ್ಥಿಗಳು ರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ  ಜ್ಞಾನಾಭಿವೃದ್ದಿ ಸಾಧ್ಯವಾಗುತ್ತದೆ. ಪಾಠಗಳ ಜೊತೆಗೆ ಹೊರಗಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಉದ್ಯೋಗ ಅವಕಾಶಗಳು ವಿಭಿನ್ನವಾದ ಆಲೋಚನೆಯನ್ನು ಮಾಡುವ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತವೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಭಾರತವನ್ನುಅಭಿವೃದ್ದಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಕರ್ತವ್ಯ.ಎಂದರು.


ಕಾರ್ಯಕ್ರಮದಲ್ಲಿ  ವಾಣಿಜ್ಯ ವಿಭಾಗದ ಮುಖ್ಯಸ್ಥೆಡಾ. ಪ್ರಿಯಾಕುಮಾರಿ ಎಸ್.ವಿ ಹಾಗೂ ಉಜಿರೆ ಎಸ್.ಡಿ.ಎಂಕಾಲೇಜಿನ ವಾಣಿಜ್ಯ ನಿಕಾಯದ ಡೀನ್ ಶಂಕುತಲಾ,  ಸಂಘಟನಾ ಕಾರ್ಯದರ್ಶಿ ಡಾ.ಸುರೇಶ  ಬಾಬು, ಕೆ.ಎನ್, ಹರ್ಷಿತ್‌ಕುಮಾರ್ ಶೆಟ್ಟಿಎನ್,   ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಬಿ.ಕೆ. ಸ್ವಾಗತಿಸಿದರು,  ಡಾ. ಸುರೇಶ್ ಬಾಬು ಕೆ.ಎನ್ ವಂದಿಸಿದರು. ದೀಕ್ಷಾ  ಮತ್ತುಕ್ಷಮಾಆಚಾರ್ಯ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top