ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಅಭ್ಯುದಯ ಸಮಾಜಕಾರ್ಯ ವೇದಿಕೆ ಹಾಗೂ ಸಂಚಲನ ಮಹಿಳಾ ತರಬೇತುದಾರರ ಒಕ್ಕೂಟ, ಕರ್ನಾಟಕ ಇವರ ಆಶ್ರಯದಲ್ಲಿಲಿಂಗತ್ವ ಸಂವೇದನೆ-ಅರಿವಿನ ಪಯಣ ಎಂಬ ಕಾರ್ಯಾಗಾರವು ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಆಶಾಲತ ಹೊಸಬೆಟ್ಟು ಅವರ ತಂಡವು ಏಕವ್ಯಕ್ತಿ ಪ್ರದರ್ಶನ, ಜಾಗೃತಿ ಗೀತೆಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಲಿಂಗತ್ವ ಸಂವೇದನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬಿ.ಎಸ್.ಡಬ್ಲ್ಯು ವಿಭಾಗದ ಪ್ರಥಮ ರಾಂಕ್ ವಿಜೇತೆ ಕು. ಶ್ರೀನಿಧಿ ಬಿ.ಎಸ್. ಮತ್ತು ಎಂ.ಎಸ್.ಡಬ್ಲ್ಯು ವಿಭಾಗದ ದ್ವಿತೀಯ ರಾಂಕ್ ವಿಜೇತೆ ಕು. ಭವ್ಯಶ್ರೀ ಇವರನ್ನು ಸಮಾಜಕಾರ್ಯ ವೇದಿಕೆ ವತಿಯಿಂದ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ. ಗಾಂವಕರ ವಹಿಸಿದ್ದು, ಮುಖ್ಯ ಅತಿಥಿಯಾಗಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ. ನಾಯ್ಕ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಮಮತ, ಸಹಾಯಕ ಪ್ರಾಧ್ಯಾಪಕರಾದ ರುಖಿಯತ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಹಾಗೂ ಸಂಚಲನ ತಂಡದ ಪ್ರೇಮಿ ಫೆರ್ನಾಂಡಿಸ್, ಮಲ್ಲಿಕ ಜ್ಯೋತಿಗುಡ್ಡೆ, ಶೈಲಜಾ, ಲೀಲಾವತಿ ಸಮಾಜಕಾರ್ಯ ವೇದಿಕೆಯ ಅಧ್ಯಕ್ಷೆ ಸೋನಿ ವಿಲ್ಮ ಸಾಲಿನ್ಸ್ ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕರಾದ ಡಾ. ಪ್ರಮೀಳ ಜೆ. ವಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಗೌತಮಿ ಜಿ. ಸುವರ್ಣ ಸ್ವಾಗತಿಸಿ, ಅಭಿಷೇಕ್ ಬಿ.ಎಸ್. ವಂದಿಸಿದರು. ಮಹಮ್ಮದ್ ಸಹದ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ