ಜೀವನೋತ್ಸಾಹ ಕಾರಂಜಿಯಂತೆ ಚಿಮ್ಮುತ್ತಿರಬೇಕು: ಡಾ. ಕಲ್ಲಡ್ಕ ಪ್ರಭಾಕರ ಭಟ್

Upayuktha
0



ಪುತ್ತೂರು: ಕಾರಂಜಿಯಲ್ಲೂ ಒಂದು ಧ್ಯೇಯವಿದೆ, ಅದರ ನೀರು ಹೇಗೆ ಮೇಲಕ್ಕೆ ಚಿಮ್ಮುತ್ತದೋ ಅದೇ ರೀತಿ ನಮ್ಮ ಜೀವನೋತ್ಸಾಹವು ಮೇಲೆ ಏರುತ್ತಿರಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮುಂಭಾಗದಲ್ಲಿ, ದಿವಂಗತ ಜಿ.ಎಲ್.ಆಚಾರ್ಯ ಅವರ ಜನ್ಮ ಶತಾಬ್ಧಿಯ ಸವಿನೆನಪಿಗಾಗಿ ಅವರ ಪುತ್ರ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಕೊಡುಗೆಯಾಗಿ ನೀಡಿದ ಕಾರಂಜಿಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತಾಡಿದರು. 


ದಿವಂಗತ ಜಿ.ಎಲ್.ಆಚಾರ್ಯ ಅವರು ಅಂದಿನ ದಿನಗಳಲ್ಲಿ ವಿದ್ಯಾವರ್ಧಕ ಸಂಘದ ಏಳಿಗೆಗಾಗಿ ದುಡಿದವರು. ಇಂದು ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅನೇಕ ಸಮಾಜಮುಖೀ ಕಾರ್ಯಗಳನ್ನು ನಡೆಸುತ್ತಿರುವುದು ಸಂತೋಷವನ್ನು ತಂದಿದೆ. ಇದರಿಂದ ಅವರ ಆತ್ಮಕ್ಕೂ ಸಂತೋಷವಾಗಿರಬಹುದು ಎಂದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ, ನಿರ್ದೆಶಕ ಬಲರಾಮ ಆಚಾರ್ಯ.ಜಿ, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಲಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್.ಡಿ ಸ್ವಾಗತಿಸಿ, ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top