ಮಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ರಾಜ್ಯ ಸರ್ಕಾರದ ಬೋರ್ಡ್ ಫಾರ್ ಐಟಿ ಎಜ್ಯುಕೇಶನ್ ಸ್ಟಾಂಡರ್ಡ್ಸ್ (ಬೈಟ್ಸ್) ಆಶ್ರಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ 16ನೇ ಆವೃತ್ತಿಯ ಸ್ಪರ್ಧೆಗಳಿಗೆ ನೋಂದಣಿಯನ್ನು ಆರಂಭಿಸಲಾಗಿದೆ.
ಯಾವುದೇ ಸೆಮಿಸ್ಟರ್‍ಗಳಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮುಕ್ತವಾಗಿರುತ್ತದೆ. ಪ್ರತಿ ಸಂಸ್ಥೆಗಳಿಂದ 20 ವಿದ್ಯಾರ್ಥಿಗಳು ಪ್ರಾದೇಶಿಕ ಫೈನಲ್‍ನಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಪ್ರವೇಶ ಉಚಿತವಾಗಿದ್ದು, ಮಾರ್ಚ್ 16ರ ಒಳಗಾಗಿ ಹೆಸರುಗಳನ್ನು ಕಳುಹಿಸಿಕೊಡಬೇಕು: manager@bites.org.in
ಮಂಗಳೂರಿನಲ್ಲಿ ಪ್ರಾದೇಶಿಕ ಮಟ್ಟದ ಫೈನಲ್ ಮಾರ್ಚ್ 18ರಂದು ನಡೆಯಲಿದೆ. ರಾಜ್ಯಮಟ್ಟದ ಫೈನಲ್ ಏಪ್ರಿಲ್ 8ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಾದೇಶಿಕ ಮಟ್ಟದ ವಿಜೇತರು ಹಾಗೂ ರನ್ನರ್ ಅಪ್‍ಗಳು ಕ್ರಮವಾಗಿ 12 ಸಾವಿರ ಮತ್ತು 10 ಸಾವಿರ ರೂಪಾಯಿ ಮೌಲ್ಯದ ಉಡುಗೊರೆ ವೋಚರ್ ಜತೆಗೆ ರಾಜ್ಯ ಫೈನಲ್‍ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯುತ್ತಾರೆ. ರಾಜ್ಯದ ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳು ಕ್ರಮವಾಗಿ 85 ಸಾವಿರ ಹಾಗೂ 50 ಸಾವಿರ ಬಹುಮಾನ ಪಡೆಯುತ್ತಾರೆ ಎಂದು ಪ್ರಕಟಣೆ ಹೇಳಿದೆ.
ರಸಪ್ರಶ್ನೆ ಸ್ಪರ್ಧೆ ತಂತ್ರಜ್ಞಾನ ಪರಿಸರ, ವ್ಯವಹಾರ, ಕ್ಷೇತ್ರದ ಜನರು, ಹೊಸ ಪ್ರವೃತ್ತಿಗಳು ಇತ್ಯಾದಿ ವಲಯಗಳನ್ನು ಕೇಂದ್ರೀಕರಿಸಲಿದೆ. ಹೆಚ್ಚಿನ ಮಾಹಿತಿಗೆ www.bites.org.in ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ